Header Ads
Breaking News

ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಗೆ ತೆರಳಿದ್ದ ಸಹೋದರರು : ಪಶ್ಚಿಮ ಬಂಗಾಳದ ಸಹೋದರರಿಗೆ ಆಸರೆಯಾದ ಕೆ.ಸಿ.ಎಫ್

 

ಸೌದಿ ಅರೇಬಿಯಾಗೆ ಕಳೆದ ಒಂದುವರೆ ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಯೊಂದಕ್ಕೆ ಉದ್ಯೊಗ ನಿಮಿತ್ತ ಆಗಮಿಸಿದ ಕೊಲ್ಕತ್ತಾ ನಿವಾಸಿಗಳಾದ ಶದಬ್ ಇಮಾಮ್ ಹಾಗೂ ಹಸನ್ ಅಬ್ಬಾಸ್ ಇವರಿಗೆ ಕಂಪನಿಯು ಈವರೆಗೆ ಯಾವುದೇ ಉದ್ಯೊಗ ನೀಡದೆ ಮತ್ತು ತಿಂಗಳ ಸಂಬಳವೂ ನೀಡದೆ ದೈನಂದಿನ ಖರ್ಚಿಗಾಗಿ ಪರದಾಡುತ್ತಿದ್ದ ಸಂದರ್ಭದಲ್ಲಿ ಅವರ ಕಷ್ಟದ ಪರಿಸ್ಥಿತಿಯನ್ನು ಕಂಡ ಕೆ.ಸಿ.ಎಫ್ ಕಾರ್ಯಕರ್ತ ಅಬ್ದುಲ್ ಸತ್ತಾರ್ ಉಚ್ಚಿಲ ಎಂಬುವವರು ಸಮಿತಿಗೆ ತಿಳಿಸಿ ಕೂಡಲೇ ಅವರಿಗೆ ಬೇಕಾದ ಎಲ್ಲಾ ರೀತಿಯ ದೈನಂದಿನ ರೇಷನ್ ವ್ಯವಸ್ಥೆಗಳನ್ನು ಏರ್ಪಡಿಸಲಾಯಿತು. ಅದೇ ರೀತಿ ಸೌದಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ನ್ಯಾಯಲಯವು ಅನುಕೂಲಕರ ತೀರ್ಪನ್ನು ನೀಡಿ ಸಹಕರಿಸಿದೆ. ನಂತರ ಅವರಿಗೆ ಊರಿಗೆ ಹೋಗಲು ಬೇಕಾದ ಎಕ್ಸಿಟ್ ವಿಸಯದಲ್ಲಿ ಸಹಕಾರ ನೀಡಿತ್ತು. ಕೆ.ಸಿ.ಎಫ್ ದಮ್ಮಾಮ್ ಝೋನ್ ಹಾಗೂ ಕೋಬರ್ ಸೆಕ್ಟರ್ ಸಮಿತಿ ವತಿಯಿಂದ ಊರಿಗೆ ಹೋಗಲು ಪ್ರಯಾಣದ ಖರ್ಚನ್ನು ಮತ್ತು ಟಿಕೇಟ್ ನೀಡಿ ಅವರಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿ ಕೊಡಲಾಯಿತು.
ಈ ಸಂದರ್ಭದಲ್ಲಿ ಅವರ ಎಲ್ಲ ವಿಸಯದಲ್ಲಿ ಸಹಾಯಿಗಳಾಗಿ ಕಾರ್ಯಚರಿಸಿದ ಕೆ.ಸಿ.ಎಫ್ ರಾಷ್ಟ್ರೀಯ ಸಾಂತ್ವನ ಚೇರ್ಮನ್ ಮುಹಮ್ಮದ್ ಮಲೆಬೆಟ್ಟು, ಕೋಬರ್ ಸೆಕ್ಟರ್ ಸಾಂತ್ವನ ಕನ್ವೀನರ್ ಶರೀಫ್ ಪೂಂಜಲ್ ಕಟ್ಟೆ, ಅದೇ ರೀತಿ ಇತರ ಸೆಕ್ಟರ್ ನಾಯಕರಿಗೆ ಪ್ರತ್ಯೇಕ ಧನ್ಯವಾದಗಳನ್ನು ಸಲ್ಲಿಸಲಾಯಿತು.

Related posts

Leave a Reply

Your email address will not be published. Required fields are marked *