Header Ads
Breaking News

ಉಪಚುನಾವಣೆ ಫಲಿತಾಂಶದ ಬಗ್ಗೆ ಅನುಮಾನ ಇದೆ- ಎಲ್ಲ ಅಂಶಗಳ ಬಗ್ಗೆ ವಿಸ್ತೃತ ಚರ್ಚೆ- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಮಂಗಳೂರು:  ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆ ಫಲಿತಾಂಶದ ಬಗ್ಗೆ ನಮಗೆ ಅನುಮಾನ ಇದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಮಂಗಳೂರಿಗೆ ಆಗಮಿಸಿದ ವೇಳೆ ಮಾತನಾಡಿದ ಡಿಕೆಶಿ ಉಪಚುನಾವಣೆಯ ಫಲಿತಾಂಶದ ಬಗ್ಗೆ ನಮ್ಮ ಪಕ್ಷಕ್ಕೆ ಅನುಮಾನವಿದ್ದು, ಇವಿಎಂ ಮೆಷಿನ್ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ಕಾಂಗ್ರೆಸ್ ವಿಸ್ತೃತ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.ಮತದಾರರು ಹೇಳುತ್ತಿದ್ದಾರೆ ನಾವು ಕಾಂಗ್ರೆಸ್ ಗೆ ಮತಚಲಾಯಿಸಿದ್ದೇವೆ ಎಂದು, ಹಾಗಾದರೆ ಈ ಮತಗಳು ಎಲ್ಲಿ ಹೋಯಿತು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಫಲಿತಾಂಶದ ಕುರಿತು ಸತ್ಯಾಂಶ ತಿಳಿಯಬೇಕಾಗಿದೆ ಎಂದು ಹೇಳಿದರು.

ಸಂಪತ್ ರಾಜ್ ರಕ್ಷಣೆ ನಳಿನ್ ಕುಮಾರ್ ಕಟೀಲ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಳಿನ್‌ಕುಮಾರ್ ಕಟೀಲ್ ಏನು ಗೃಹಸಚಿವರ ಎಂದು ಪ್ರಶ್ನಿಸಿದ ಡಿ.ಕೆ.ಶಿ ಅವರು, ಈ ಆರೋಪ ನಿಜವೇ ಆದರೆ ನನ್ನನ್ನು ಬಂಧಿಸಬಹುದಲ್ವಾ, ಈಗಾಗಲೇ ಬಂಧಿಸಲಾಗಿದೆ, ಮುಂದೆಯೂ ಅರೆಸ್ಟ್ ಮಾಡೊದಾದ್ರೆ ಮಾಡಲಿ, ಇನ್ನು ಏನೇನು ತೊಂದರೆ ಕೊಡಬಹುದು ಎಂದು ಯೋಚಿಸುತ್ತಿದ್ದಾರೆ. ಎಲ್ಲಾ ನೋಟೀಸ್ ಬರ್ತಾ ಇದೆ, ಇನ್ನೊಂದು ನೋಟೀಸ್ ಸಹ ಕೊಡಲಿ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *