Header Ads
Breaking News

ಉಪಚುನಾವಣೆ ಬಂದ್ರೆ ಮಾತ್ರ ಅಭಿವೃದ್ಧಿ ನಿಗಮ ಘೋಷಣೆ – ಶಾಸಕ ಯುಟಿ ಖಾದರ್

ಮಂಗಳೂರು:ರಾಜ್ಯ ಸರ್ಕಾರದಿಂದ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯನ್ನು ಮಾಡಿದೆ. ಇದರಿಂದಲೇ ಬಿಜೆಪಿಯ ವೋಟ್ ಬ್ಯಾಂಕ್ ರಾಜಕಾರಣ ಗೊತ್ತಾಗುತ್ತಿದೆ, ಶಿರಾ ಉಪಚುನಾವಣೆ ಬಂದಾಗ ಗೊಲ್ಲರ ಅಭಿವೃದ್ಧಿ ನಿಗಮ ಮಾಡಿದ್ದರು. ಬಸವ ಕಲ್ಯಾಣ ಚುನಾವಣೆ ಮುಂದಿಟ್ಟುಕೊಂಡು ನಿಗಮ ಸ್ಥಾಪನೆ ಮಾಡಿದ್ದಾರೆ ಎಂದು ಮಾಜಿ ಸಚಿವ ಶಾಸಕ ಯು.ಟಿ. ಖಾದರ್ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದ ಜನತೆಗೆ ಯಾರು ಜಾತಿ ಒಲೈಕೆ ಮಾಡ್ತಿರೋದು ಗೊತ್ತಾಗ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಜಾತಿಯವರು ಇದ್ದಾರೆ.ಎಲ್ಲಾ ಜಾತಿಯ ಅಭಿವೃದ್ಧಿ ನಿಗಮವೂ ಬೇಕು. ಉಪಚುನಾವಣೆ ಬಂದ್ರೆ ಮಾತ್ರ ಅಭಿವೃದ್ಧಿ ನಿಗಮ ಘೋಷಣೆ ಮಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜಾತಿ ಅಭಿವೃದ್ಧಿ ನಿಗಮ ಬೇಕು. ರಾಜ್ಯದ ಬೊಕ್ಕಸದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರಿಗೂ ಹಕ್ಕಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ಆಗ್ರಹಿಸಿದರು.

Related posts

Leave a Reply

Your email address will not be published. Required fields are marked *