Header Ads
Header Ads
Breaking News

ಉಪ್ಪಳದಲ್ಲಿ ಸಮಾಜ ಘಾತುಕರ ದುಷ್ಕೃತ್ಯ : ಆರೋಪಿಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಉಪ್ಪಳದಲ್ಲಿ ಕಿಡಿಗೇಡಿಯೊಬ್ಬ ರೈಲ್ವೇ ಸ್ಟೇಶನ್ ರಸ್ತೆಯಲ್ಲಿ ಅಂಗಡಿ, ಕಾರು, ಬಸ್ಸುಗಳ ಗಾಜುಗಳನ್ನು ಒಡೆದು ನಾಶಗೈದಿದ್ದಾನೆ. ಆರೋಪಿಯು ಮಾಡಿರುವ ಕೃತ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಉಪ್ಪಳ ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದಾರೆ.ಸಮಾಜದ್ರೋಹಿಯೊಬ್ಬ ಬುಧವಾರ ರಾತ್ರಿಯಲ್ಲಿ ಉಪ್ಪಳ ಉಪ್ಪಳ ರೈಲ್ವೇ ಸ್ಟೇಶನ್ ರಸ್ತೆಯ ಕೆಳ ಭಾಗದಲ್ಲಿರುವ ದೈವಸ್ಥಾನದ ಪರಿಸರದಲ್ಲಿ ನಿಲ್ಲಿಸಲಾಗಿದ್ದ ಕರ್ನಾಟಕ ಕೆ ಎಸ್ ಆರ್ ಟಿ ಸಿ ಬಸ್ಸಿನ ಗಾಜುಗಳನ್ನು ಪುಡಿಗೈಯಲಾಗಿದೆ. ಅದೇ ರೀತಿ ದೇವಸ್ಥಾನದಿಂದ ಮೇಲ್ಬಾಗದಲ್ಲಿರುವ ಮಹಮ್ಮದೀಯ ಮಸೀದಿ ಪರಿಸರದಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳ ಗಾಜುಗಳನ್ನು ಪುಡಿಗೈದು ಹಾನಿಗೊಳಿಸಲಾಗಿದೆ. ಬಳಿಕ ಉಪ್ಪಳ ಕೆ ಎನ್ ಎಚ್ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಕಾರುಗಳ ಗಾಜುಗಳನ್ನು ಪುಡಿಗೈಯಲಾಗಿದೆ. ಅದೇ ರೀತಿ ಅದರ ಅಲ್ಪ ದೂರವಿರುವ ಅನಂತ ಜ್ಯುವೆಲ್ಲರ್ಸ್ ಅಂಗಡಿಯ ಗಾಜನ್ನು ಸಂಪೂರ್ಣವಾಗಿ ಪುಡಿಗೈಯಲಾಗಿದೆ.

ಘಟನಾ ಸ್ಥಳಕ್ಕೆ ವ್ಯಾಪಾರಿ ಏಕೋಪನ ಸಮಿತಿ ಪದಾಧಿಕಾರಿ ರಫೀಕ್ ಕೆ ಐ, ಮುಸ್ಲಿಂ ಲೀಗ್ ಉಪ್ಪಳ ಘಟಕದ ಅಧ್ಯಕ್ಷ ಅಬ್ದುಲ್ ಹಮೀದ್, ಮಾಜಿ ವಾರ್ಡ್ ಸದಸ್ಯ ಅಝೀಂ ಮಣಿಮುಂಡ, ಕಮಲಾಕ್ಷ, ಬಾಸ್ಕರ ಸೇರಿದಂತೆ ಹಲವರು ಮಂದಿ ಭೇಟಿ ನೀಡಿದ್ದಾರೆ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

Related posts

Leave a Reply

Your email address will not be published. Required fields are marked *