Header Ads
Header Ads
Breaking News

ಉಪ್ಪಳದಲ್ಲಿ ಸಿಪಿಎಂ ಕಾರ್ಯಕರ್ತನ ಬರ್ಬರ ಹತ್ಯೆ. ಬೈಕಿನಲ್ಲಿ ಬಂದ ನಾಲ್ವರು ಆರೋಪಿಗಳು. ಮದ್ಯ ಮಾರಾಟ ನಿಷೇಧಿಸಿದ್ದೇ ಕೊಲೆಗೆ ಕಾರಣ. ಮಂಜೇಶ್ವರ ತಾಲೂಕಿನಲ್ಲಿ ಹರತಾಳ.

ಮಂಜೇಶ್ವರ: ಮದ್ಯ ಮಾರಾಟ ನಿಷೇಧಿಸಿದ ಸಿ.ಪಿ.ಎಂ ಕಾರ್ಯಕರ್ತನೊಬ್ಬನನ್ನು ಬೈಕಿನಲ್ಲಿ ಆಗಮಿಸಿದ ನಾಲ್ವರ ತಂಡವೊಂದು ನಡು ರಸ್ತೆಯಲ್ಲೇ ಬರ್ಬರವಾಗಿ ಕೊಲೆಗೈದು ಪರರಿಯಾಗಿದೆ. ಸೋಂಕಾಲು ನಿವಾಸಿ ಅಝೀಝ್ ಎಂಬವರ ಪುತ್ರ ಅಬೂಬಕ್ಕರ್ ಸಿದ್ದೀಕ್(21) ಕೊಲೆಗೀಡಾಗಿದ್ದು. ಬಾನುವರ ರಾತ್ರಿ ೧೧ ಘಂಟೆಗೆ ಮಂಗಲ್ಪಾಡಿಯ ಸೋಂಕಾಲು ಎಂಬಲ್ಲಿ ಕೊಲೆ ನಡೆದಿದೆ.ಬೈಕ್ ನಲ್ಲಿ ತಲುಪಿದ ಬಿಜೆಪಿ ನೇತರನೊಬ್ಬನ ಅಳಿಯ ಅಶ್ವತ್ ಹಾಗೂ ಆತನ ನಾಲ್ವರು ಆರ್.ಎಸ್.ಎಸ್ ಕಾರ್ಯಕರ್ತರ ತಂಡ ಕೊಲೆ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ಬೈಕ್ ನಲ್ಲಿ ತಲುಪಿದ ನಾಲ್ವರ ತಂಡ ಸಿದ್ದೀಕ್ ನನ್ನು ಮಾರಕಾಯುಧಗಳಿಂದ ಇರಿದಿದ್ದು ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಸಿದ್ದೀಕ್ ನನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಿದ್ದೀಕ್ ಸಾವನ್ನಪ್ಪಿದ್ದಾನೆ. ಸೋಂಕಾಲಿನಲ್ಲಿ ರಾತ್ರಿ ವೇಳೆ ವ್ಯಾಪಕವಗಿ ಅಕ್ರಮ ಮದ್ಯ ಮಾರಾಟದ ದಂಧೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸಿರುವುದೇ ಯುವಕನ ಕೊಲೆಗೆ ಕಾರಣವೆನ್ನಲಾಗಿದೆ. ಖತಾರ್ ನಲ್ಲಿ ರುವ ಸಿದ್ದೀಕ್ ಕೆಲವು ದಿನಗಳ ಹಿಂದೆ ಊರಿಗೆ ಅಗಮಿಸಿದ್ದನು . ಕೊಲೆ ಹಿನ್ನಲೆಯಲ್ಲಿ ಘಟನಾ ಸ್ಥಳದಲ್ಲಿ ಕಾಸರಾಗೋಡು ಡಿ.ವೈ.ಎಸ್.ಪಿ ಎಂ.ವಿ ಸುಕುಮಾರನ್ , ಕುಂಬಳೆ ಸಿ.ಐ ಪ್ರೇಂ ಸದನ್ ನೇತ್ರತ್ವದ ಪೊಲೀಸ್ ತಂಡ ಮೊಕ್ಕಾಂ ಹೂಡಿದೆ. ಆರ್.ಎಸ್.ಎಸ್ ಬಿ.ಜೆ.ಪಿ ಕಾರ್ಯಕರ್ತರು ಕೊಲೆಗೈದಿರುವುದಾಗಿ ಸಿಪಿಎಂ ಆರೋಪಿಸಿದೆ. ಶವವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಹೆಚ್ಚಿನ ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ಮೆಡಿಕಲ್ ಕಾಲೇಜು ಅಸ್ಪತ್ರೆಗೆ ಕೊಂಡೊಯ್ಯುವ ಸಾಧ್ಯತೆ ಇರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Related posts

Leave a Reply