Header Ads
Header Ads
Breaking News

ಉಪ್ಪಳಿಗೆ-ಶೇಕಮಲೆ ರಸ್ತೆ ಅಭಿವೃದ್ಧಿ ಕಾಮಗಾರಿ : ರಸ್ತೆ ನಿರ್ಮಾಣ ಕುರಿತಂತೆ ತಡೆಯಾಜ್ಞೆ

ಪುತ್ತೂರು: ಪುತ್ತೂರಿನ ಉಪ್ಪಳಿಗೆ-ಶೇಕಮಲೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಸ್ವಾಧೀನ ಅನುಭೋಗದಲ್ಲಿರುವ ಜಮೀನಿನ ಪಕ್ಕದಲ್ಲಿ ಇದೆ ಆರಸ್ತೆ. ಈ ಸಂಬಂಧ ದಲ್ಲಾಳಿಯೊಬ್ಬರು ನನ್ನ ಸ್ವಂತ ಪಟ್ಟಾ ಜಮೀನನ್ನು ಬಿಟ್ಟು ಕೊಡುವಂತೆ ನನ್ನ ಮೇಲೆ ಒತ್ತಡ ಹೇರಿದ್ದರು. ಈ ಒತ್ತಡ ಅನುಸರಿಸಿ ನಾನು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತೇನೆ. ರಸ್ತೆ ನಿರ್ಮಾಣ ಕುರಿತಂತೆ ತಡೆಯಾಜ್ಞೆಯ ಕಾರಣದಿಂದ ಅಧಿಕಾರಿಗಳಿಗೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಸ್ಥಳದ ಮಾಲಿಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಆರ್. ದೇವಪ್ಪ ಗೌಡ ಹೇಳಿದ್ದಾರೆ. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾನು ಯಾವುದೇ ಸಾರ್ವಜನಿಕ ಹಿತಾಸಕ್ತಿ, ವ್ಯವಸ್ಥೆಗಳಿಗೆ ಅಡ್ಡಿ ಪಡಿಸುವ ವ್ಯಕ್ತಿಯಲ್ಲ. ಇಳಿ ವಯಸ್ಸಿನ ನನ್ನ ಹೆಸರಿಗೆ ಮಸಿ ಬಳಿಯುವ ಮತ್ತು ನನ್ನ ಸ್ವಂತ ಸ್ಥಳವನ್ನು ರಕ್ಷಿಸುವ ಸಂವಿದಾನದತ್ತ ಹಕ್ಕಿಗೆ ಧಕ್ಕೆ ತರುವ ಕೆಲಸವನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ತೆರೆಯ ಮರೆಯಲ್ಲಿ ನಿಂತು ಮಾಡುತ್ತಿರುವುದು ವಿಷಾದನೀಯ ಎಂದರು.ಸುದ್ದಿಗೋಷ್ಠಿಯಲ್ಲಿ ಟಿ. ಅಬೂಬಕ್ಕರ್ ಕೊರಿಂಗಿಲ, ಅಬ್ದುಲ್ ರಹಿಮಾನ್, ಮಹಾಲಿಂಗ ನಾಯ್ಕ ಉಪಸ್ಥಿತರಿದ್ದರು.

Related posts

Leave a Reply