Header Ads
Header Ads
Breaking News

ಉಪ್ಪಳ ಕೈಕಂಬದಲ್ಲಿ ಉಪ್ಪಳ ಫೆಸ್ಟ್‌ಗೆ ಚಾಲನೆ

ಮಂಜೇಶ್ವರ: ಡಿಜೆ ಅಮ್ಯೂಸ್‌ಮೆಂಟ್‌ನ ನೇತೃತ್ವದಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಕೈಕಂಬ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಉಪ್ಪಳ ಫೆಸ್ಟ್‌ಗೆ ಚಾಲನೆ ದೊರಕಿತು.

ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಸದಸ್ಯೆ ಫರೀದಾ ಸಕೀರ್ ಉಪ್ಪಲ ಫೆಸ್ಟ್‌ಗೆ ಚಾಲನೆ ನೀಡಿದರು. ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಎಕೆಎಂ ಅಶ್ರಫ್, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭ ಫೆಸ್ಟ್ ಕೋರ್ಡಿನೇಟರ್ ಅರ್ಜುನ್ ತಾಯಿಲಂಗಾಡಿ, ಐಲ ಕ್ಷೇತ್ರ ಟ್ರಸ್ಟೀ ಬೋರ್ಡ್ ಅಧ್ಯಕ್ಷ ನಾರಾಯಣ ಹೆಗ್ಡೆ, ಮಂಗಲ್ಪಾಡಿ ಪಂ. ಸದಸ್ಯ ಬಿ ಎಂ ಮುಸ್ತಫ, ಅಬುಲ್ ರಜಾಕ್, ಆಯಿಷತ್ ಫಾರಿಸ, ಶಂಸಾದ್ ಬೇಗಂ, ಸುಜಾತ ಶೆಟ್ಟಿ, ಅಬ್ದುಲ್ ಜಲೀಲ್, ವಿಜಯ ಕುಮಾರ್ ರೈ, ಹಮೀದ್ ಕೋಸ್ಮೋಸ್, ಸಂಜಿವ ಭಂಡಾರಿ ಸೇರಿದಂತೆ ಹಲವರು ಉಪಸ್ಥರಿದ್ದರು.

ಅದ್ಬುತ ದೃಶ್ಯಗಳ ರೋಬರ್ಟ್ ಪ್ರಾಣಿಗಳ ಪ್ರದರ್ಶನ, ಹಿರಿಯರಿಗೆ ಹಾಗೂ ಕಿರಿಯರು ಆನಂದಿಸಲು ಅಮ್ಯೂಸ್‌ಮೆಂಟ್ ಪಾರ್ಕುಗಳು, ಮರಣ ಬಾವಿಗಳು, ಫುಡ್ ಕೋಟ್ಸ್, ವಿವಿಧ ರಾಜ್ಯಗಳಿಂದ ಆಗಮಿಸಿದ ಸ್ಟಾಲ್‌ಗಳು ಉಪ್ಪಳ ಫೆಸ್ಟ್ ನ ವಿಶೇಷತೆಗಳಾಗಿವೆ. ಪ್ರತಿ ದಿನ ಸಂಜೆ ೪ ಗಂಟೆಯಿಂದ ರಾತ್ರಿ ೯ ಗಂಟೆ ತನಕ ಫೆಸ್ಟ್ ಪ್ರದರ್ಶನ ನಡೆಯಲಿದೆ.

Related posts

Leave a Reply