Header Ads
Breaking News

ಉಪ್ಪಳ ಮಣಿಮುಂಡ ಶಾಲೆಯ 11ನೇ ವಾರ್ಷಿಕೋತ್ಸವ : ವಿಜೃಂಭಣೆಯಿಂದ ನಡೆದ ಕಾರ್ಯಕ್ರಮ

ಮಂಜೇಶ್ವರ: ಉಪ್ಪಳ ಮಣಿಮುಂಡ ಆಂಗ್ಲ ಮಾಧ್ಯಮ ಶಾಲೆಯ 11 ನೇ ವಾರ್ಷಿಕೋತ್ಸವವನ್ನು ಒಳಯಂ ಡಿ.ಎಂ ಕಬಾನದಲ್ಲಿ ಭಾರೀ ವಿಜೃಂಭಣೆಯಿಂದ ಅಚರಿಸಲಾಯಿತು. ಕೇರಳ ಕರ್ನಾಟಕ ಗಡಿ ಪ್ರದೇಶವಾದ ಸಪ್ತಭಾಷಾ ಭೂಮಿಯ ಭಾಷೆಗಳಲ್ಲಿ ವಿದ್ಯಾರ್ಥಿಗಳು ಅತಿಥಿಗಳನ್ನು ಸ್ವಾಗತಿಸುವ ಮೂಲಕ ವಾರ್ಷಿಕ ಸಂಭ್ರಮಕ್ಕೆ ಚಾಲನೆ ದೊರಕಿತು.

ಬಳಿಕ ಜಾಫರ್ ಮುಸ್ಲಿಯಾರುಗಳ ಪ್ರಾಥಣೆಯೊಂದಿಗೆ ಆಗಮಿಸಿದ ಅತಿಥಿಗಳನ್ನು ಹೂ ಗುಚ್ಚ ನೀಡಿ ಸ್ವಾಗತಿಸಲಾಯಿತು.ಬಳಿಕ ಶಾಲಾ ಮುಖ್ಯೋಪಧ್ಯಾಯಿನಿ ಶಮೀಮಾ ಇಕ್ಬಾಲ್ ವಾರ್ಷಿಕ ವರದಿಯನ್ನು ಮಂಡಿಸಿದರು.

ಆ ಬಳಿಕ ಮಂಜೇಶ್ವರ ಉಪಜಿಲ್ಲಾ ಅಸಿಸ್ಟಂಟ್ ವಿದ್ಯಾಧಿಕಾರಿ ದಿನೇಶ್ ಕೆ ವಿ ಯವರು ವಾರ್ಷಿಕ ಸಂಭ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂತಹ ಶಾಲೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅತೀವ ಸಂತೋಷವಾಗುತ್ತಿದೆ. ನಾನೊನ್ನ ಸಾಮಾಜಿಕ ಶಿಕ್ಷಣಗಳ ಅಭಿವೃದ್ದಿಗಾಗಿ ಡುದಿಯುವ ಒಬ್ಬ ವ್ಯಕ್ತಿ. ಸಮಾಜದಲ್ಲಿ ಮಕ್ಕಳ ಏಳಿಗೆಗಾಗಿ ನಾವು ಶ್ರಮಿಸ ಬೇಕಾಗಿದೆ. ಇಂದಿನ ಮಕ್ಕಳೇ ಮುಂದಿನ ಜನಾಂಗ ಆ ನಿಟ್ಟಿನಲ್ಲಿ ಅವರನ್ನು ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕಾಗಿದೆ. ಇಂತಹ ಕಾರ್ಯಕ್ರಮಗಳು ಅಭಿನಂದನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಸ್ಥುತ ಶಾಲೆಯ ಅಧ್ಯಕ್ಷರಾದ ಜನಾಬ್ ಮೂಸಾ ಹಾಜಿ ಆಲುವಾಯಿಯವರು ಮಾತನಾಡಿ  ಕಳೆದ ಹತ್ತು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿರುವ ಉಪ್ಪಳ ಮಣಿಮುಂಡ ಅಂಗ್ಲಮಾಧ್ಯಮ ಶಾಲೆ ಇದೀಗ ತನ್ನ ಸುದೀರ್ಘವಾದ ಹತ್ತು ವರ್ಷವನ್ನು ಪೂರೈಸಿ 11 ನೇ ವರ್ಷಕ್ಕೆ ಪಾದಾರ್ಪಣೆಗೈದಿದೆ. ಇದಕ್ಕೆ ಸಹಕಾರ ನೀಡಿದ ಪೆಷಕರ ಸಹಿತ ಎಲ್ಲರಿಗೂ ಆಭಾರಿಯಾಗಿರುವುದಾಗಿ ಹೇಳಿ ವಾರ್ಷಿಕೋತ್ಸವಕ್ಕೆ ಶುಭವನ್ನು ಹಾರೈಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಮಿಲ್ ಶಾಲೆಯ ಪ್ರಾಂಶುಪಾಲರಾದ ಮೊಯಿದೀನ್ ಕುಂಞಯವರು ಮಾತನಾಡಿ ಈಗಿನ ಮಕ್ಕಳು ಆಧಿನಿಕ ರೀತಿಯಲ್ಲಿ ಸುಸಜ್ಜಿತವಾದ ಕೊಠಡಿಯಲ್ಲಿ ಎಲ್ಲಾ ವಿಧ ಸೌಲಭ್ಯಗಳೊಂದಿಗೆ ವಿದ್ಯೆಯನ್ನು ಕಲಿಯುತಿದ್ದಾರೆ. ಆದರೆ ಮೊಬೈಲ್ ಹಾವಳಿಯಿಂದಾಗಿ ಬಹುತೇಕ ಮಕ್ಕಳ ಭವಿಷ್ಯ ಹಾಲಾಗುತ್ತಿದೆ. ಮೊಬೈಲ್ ಸಣ್ಣ ಮಕ್ಕಳ ಕೊಡಿಸದ ರೀತಿಯಲ್ಲಿ ಪೆಷಕರು ಜಾಗ್ರತೆಯನ್ನು ವಹಿಸಬೇಕಾಗಿದೆ. ಮೊದಲಿನ ರೀತಿಯಲ್ಲಿ ಅಲ್ಲ ಈಗ ಕಾಲೌಲ್ಟಾ ಪಲ್ಟಿಯಾಗಿರುವುದಾಗಿ ಹೇಳಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

ಬಳಿಕ ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕುಂಬಳೆ ಅಕಾಡಮಿಯ ಕಲೀಲ್, ಇಸ್ಮಾಯಿಲ್, ಜಾಫರ್ ಮುಸ್ಲಿಯಾರ್, ನೂರ್ ಮೊಹಮ್ಮದ್, ಇಸ್ಮಾಯಿಲ್ ದಾವೂದ್, ಅಝೀಂ ಮಣಿಮುಂಡ, ಮೊಯಿದೀನ್ ಕುಟ್ಟಿ ಮಾಸ್ಟರ್ ಕುಂಡೇರಿ, ಅಬ್ದುಲ್ ರಶೀದ್ ಮೊದಲಾದವರು ಉಸ್ಥಿತರಿದ್ದರು.

ಬಳಿಕ ವೇದಿಕೆಯಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದ ಪೆಷಕರನ್ನು ಮನರಂಜಿಸಿತು.

Related posts

Leave a Reply

Your email address will not be published. Required fields are marked *