Header Ads
Breaking News

ಉಪ್ಪಿನಂಗಡಿಯಲ್ಲಿ “ಸಂವಿಧಾನ ಉಳಿಸಿ ದೇಶ ರಕ್ಷಿಸಿ” ಬೃಹತ್ ಪ್ರತಿಭಟನೆ

ಉಪ್ಪಿನಂಗಡಿ: ಧರ್ಮ, ದೇವರು, ಜಾತಿ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಮಾನವ ಧರ್ಮವನ್ನು ವಿಭಜಿಸುತ್ತಾ ರಾಜಕೀಯ ಮಾಡುವವರು ಈ ದೇಶದ ನಿಜವಾದ ದೇಶ ದ್ರೋಹಿಗಳು ಎಂದು ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಅವರು ಉಪ್ಪಿನಂಗಡಿಯಲ್ಲಿ ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾದ “ಸಂವಿಧಾನ ಉಳಿಸಿ ದೇಶ ರಕ್ಷಿಸಿ” ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ ಮುಸ್ಲಿಮರು, ದಲಿತರು, ಕ್ರೈಸ್ತರು, ಹಿಂದುಳಿದ ವರ್ಗದವರು ಈ ಭಾರತ ದೇಶವನ್ನು ಕಟ್ಟಿದವರು ಇವರುಗಳೇ ಈ ನೆಲದ ಮಾಲೀಕರು ಎಂದು ಅವರು ಪ್ರತಿಪಾದಿಸಿದರು.

ಚಿಕ್ಕಮಗಳೂರಿನ ವಕೀಲ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿ ಪೌರತ್ವ ಸಾಬೀತು ಕೇವಲ ಮುಸ್ಲಿಮರಿಗೆ ಮಾತ್ರ ಅಲ್ಲ, ದೇಶದಲ್ಲಿರುವ ಮುಸ್ಲಿಂ, ಕ್ರೈಸ್ತ, ಬುದ್ಧ, ಮೊಗವೀರ, ದಲಿತರು ಹೀಗೆ ಎಲ್ಲ ಸಮುದಾಯವರೂ ಸಾಬೀತು ಮಾಡಬೇಕಾಗಿದೆ, ಈ ನೆಲದಲ್ಲಿ ಹುಟ್ಟಿರುವ ನಾವುಗಳು ಸಾಬೀತು ಪಡಿಸುವ ಅಗತ್ಯ ಇದೆಯೇ ಎಂದು ಚಿಂತನೆ ಮಾಡಬೇಕಾಗಿದೆ ಎಂದರು.

ಈ ಸಂದರ್ಭ ಪಿ.ಎಫ್.ಐ. ದ.ಕ. ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕುಂಂಞ, ಮಂಗಳೂರು ಸಲಫಿ ಮೂವ್‌ಮೆಂಟ್‌ನ ಇಬ್ರಾಹಿಂ ಖಲೀಲ್ ತಲಪಾಡಿ ,ಕಡಬ ತಾಲೂಕು ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್ ಅಧ್ಯಕ್ಷ ಕ್ಷೇವಿಯರ್ ಬೇಬಿ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *