Header Ads
Header Ads
Header Ads
Breaking News

ಉಪ್ಪಿನಂಗಡಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳ್ಳತನ ನಗದು ದೋಚಿ ಪರಾರಿಯಾದ ಕಳ್ಳರು ಸಿಸಿಟಿವಿಯ ಡಿವಿ‌ಆರ್ ಕಳವುಗೈದ ಖತರ್ನಾಕ್ ಕಳ್ಳರು

ಪುತ್ತೂರಿನ ಉಪ್ಪಿನಂಗಡಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ. ಬಾಗಿಲಿನ ಬೀಗವನ್ನು ಎಕ್ಸಲ್ ಬ್ಲೇಡ್‌ನಿಂದ ತುಂಡರಿಸಿ ಈ ಕೃತ್ಯವೆಸಗಿದ ಕಳ್ಳರು ಸುಮಾರು 36 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಇನ್ನೂ ಖದೀಮರು ಸಿಸಿ ಕ್ಯಾಮರದ ದೃಶ್ಯಾವಳಿಗಳು ಶೇಖರಗೊಳ್ಳುವ ಡಿವಿ‌ಆರ್ ಅನ್ನೇ ದೋಚಿದ್ದಾರೆ.

ಖದೀಮರು ಬೀಗಮುರಿದು ಒಳನುಗ್ಗಿ ಕೊಠಡಿಯ ಕಪಾಟುಗಳನ್ನೆಲ್ಲಾ ಜಾಲಾಡಿದ್ರೂ. ಕಳ್ಳರು ನುಗ್ಗಿದ ಎಲ್ಲಾ ಕೊಠಡಿಗಳ ಬೀಗಗಳನ್ನು ಎಕ್ಸಲ್ ಬ್ಲೇಡ್‌ನಿಂದ ತುಂಡರಿಸಲಾಗಿದೆ. ಕಳೆದ ರಾತ್ರಿ ಕಳ್ಳರು ಈ ಕೃತ್ಯವೆಸಗಿದ್ದು, ಇವತ್ತು ಮುಂಜಾನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ ನೇತೃತ್ವದಲ್ಲಿ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ರು.

Related posts

Leave a Reply