Breaking News

ಉಪ್ಪಿನಂಗಡಿ ಬಳಿಯ ೩೪ನೇ ನೆಕ್ಕಿಲಾಡಿ,  ಉದ್ಯಮಿ ಮನೆಯಿಂದ ಕಳ್ಳತನಕ್ಕೆ ಯತ್ನ


ಉಪ್ಪಿನಂಗಡಿಯ ಉದ್ಯಮಿಯೋರ್ವರ ಮನೆಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಏನೂ ದೊರೆಯದೇ ಬರಿಗೈಯಲ್ಲಿ ವಾಪಸ್ಸಾದ ಘಟನೆ ವರದಿಯಾಗಿದೆ.
ಇಲ್ಲಿನ ೩೪ನೇ ನೆಕ್ಕಿಲಾಡಿ ನಿವಾಸಿ ಇಸ್ಮಾಯೀಲ್ ಇಕ್ಬಾಲ್ ಎಂಬವರ ಮನೆಗೆ ಎದುರಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮನೆಯೊಳಗಿದ್ದ ಕಪಾಟುಗಳನ್ನು ತೆರೆದು, ಅದರಲ್ಲಿದ್ದ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಾರೆ. ಅಲ್ಲದೆ ಡ್ರಾವರ್ ತೆಗೆದು ಅದರಲ್ಲಿದ್ದ ಆಭರಣ ಪೆಟ್ಟಿಗೆಗಳನ್ನೆಲ್ಲಾ ತಡಕಾಡಿದ್ದಾರೆ. ಆದರೆ ಇಸ್ಮಾಯಿಲ್ ಇಕ್ಬಾಲ್ ಅವರು ಮೊದಲಿನಿಂದಲೂ ಚಿನ್ನಾಭರಣವನ್ನು ಬ್ಯಾಂಕ್ ಲಾಕರ್‌ನಲ್ಲಿಡುತ್ತಿದ್ದು, ನಗದನ್ನು ಕೂಡಾ ಬ್ಯಾಂಕ್‌ನಲ್ಲಿಯೇ ಇಡುತ್ತಿದ್ದರು. ಹಾಗಾಗಿ ಕಳ್ಳರಿಗೆ ಇಲ್ಲೇನೂ ಸಿಗದೇ ಬರಿಗೈಯಲ್ಲೇ ವಾಪಸಾಗುವಂತಾಗಿದೆ.

Related posts

Leave a Reply