Header Ads
Header Ads
Breaking News

ಉಪ್ಪಿನಂಗಡಿ :ವರದಕ್ಷಿಣೆಗೆ ಬೇಡಿಕೆಯಿಟ್ಟು ನವವಿವಾಹಿತೆಗೆ ಕಿರುಕುಳ

ನವವಿವಾಹಿತೆಯೊಬ್ಬರಿಗೆ ಪತಿ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಉಪ್ಪಿನಂಗಡಿ ಸಮೀಪದ ಕಡವಿನಬಾಗಿಲು ಎಂಬಲ್ಲಿ ನಡೆದಿದೆ. ಅಸ್ವಸ್ಥಗೊಂಡ ಮಹಿಳೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಸೂರ್ಯ ನಿವಾಸಿ, ದಿನಸು ವ್ಯಾಪಾರಿ ಅಬ್ದುಲ್ ಖಾದರ್ ಅವರ ಪುತ್ರಿ ಬಲ್ಕೀಷ್ ಪತಿಯ ದೌರ್ಜನ್ಯಕ್ಕೆ ಒಳಗಾದ ಮಹಿಳೆ. ಉಪ್ಪಿನಂಗಡಿ ಸಮೀಪದ ಕಡವಿನ ಬಾಗಿಲು ನಿವಾಸಿ ಕಟ್ಟಿಗೆ ವ್ಯಾಪಾರಿ ಉಮರಬ್ಬ ಅವರ ಪುತ್ರ ನಿಸಾರ್ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಬ್ದುಲ್ ಖಾದರ್ ಅವರ ಪುತ್ರಿ ಬಲ್ಕೀಷ್ ಮತ್ತು ಉಪ್ಪಿನಂಗಡಿಯ ಕಡವಿನ ಬಾಗಿಲು ನಿವಾಸಿ ಉಮ್ಮರಬ್ಬ ಅವರ ಪುತ್ರ ನಿಸಾರ್ ಅವರ ವಿವಾಹ ಮೇ.7ರಂದು ನಡೆದಿತ್ತು. ಉಮರಬ್ಬ ಅವರ ಬೇಡಿಕೆಯಂತೆ ಅಬ್ದುಲ್ ಖಾದರ್ ಅವರು ಜಮೀನು ಅಡವಿಟ್ಟು ಸಹಕಾರಿ ಬ್ಯಾಂಕಿನಿಂದ ಸಾಲ ಪಡೆದು ರೂ.2.30ಲಕ್ಷ ಹಾಗೂ ವಿವಾಹದ ವೇಳೆ ರೂ.70 ಸಾವಿರ ಸೇರಿದಂತೆ ಒಟ್ಟು ರೂ.3 ಲಕ್ಷವನ್ನು ಉಮರಬ್ಬ ಅವರಿಗೆ ಸಾಲವಾಗಿ ನೀಡಿದ್ದರು. ವಿವಾಹದ ವೇಳೆ 13 ಪವನ್ ಚಿನ್ನಾಭರಣ ನೀಡಲಾಗಿತ್ತು. ಆದರೆ ವಿವಾಹದ ಬಳಿಕ ವರದಕ್ಷಿಣೆಯಾಗಿ ರೂ.2 ಲಕ್ಷ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ನಿಸಾರ್ ಪತ್ನಿಗೆ ನಿರಂತರವಾಗಿ ಹಲ್ಲೆ ನಡೆಸುತ್ತಾ ಕಿರುಕುಳ ನೀಡಲಾರಂಭಿಸಿರುವುದಾಗಿ ಆರೋಪಿಸಲಾಗಿದೆ.

ವಿವಾಹವಾದ ವಾರದ ಬಳಿಕ ಪತಿ ಹಲ್ಲೆ ನಡೆಸಲು ಆರಂಭಿಸಿದ್ದು, ಪದೇ ಪದೇ ಹಣ ನೀಡಬೇಕೆಂದು ಸತಾಯಿಸುತ್ತಾ,ನಿರಂತರವಾಗಿ ಕಿರುಕುಳ ನೀಡಿದ್ದಾರೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಜೀವಂತ ಬಿಡುವುದಿಲ್ಲ ಎಂದು ಜೀವಬೆದರಿಕೆಯೊಡ್ಡಿದ್ದಾರೆ. ರೂ.2 ಲಕ್ಷ ನೀಡದಿದ್ದರೆ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊ ಎಂದು ಬೆದರಿಸಿ ಮಾನಸಿಕ ಹಿಂಸೆ ನೀಡಿದ್ದಾರೆ.ಮಾವ,ಅತ್ತೆ ಹಾಗೂ ಪತಿ ಸೇರಿಕೊಂಡು ಚಿತ್ರ ಹಿಂಸೆ ನೀಡಿದ್ದಾರೆ. ಈ ಹಿಂಸೆ ತಾಳಲಾಗದೆ ತಾನು ಈ ವಿಚಾರವನ್ನು ಮನೆಯವರಿಗೆ ತಿಳಿಸಿದ್ದು, ಹೆತ್ತವರು ಬಂದು ತನ್ನನ್ನು ಮನೆಗೆ ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಲ್ಕೀಷ್ ಅವರು ತಿಳಿಸಿದ್ದಾರೆ.
ವರದಕ್ಷಿಣೆಗಾಗಿ ಪೀಡಿಸುತ್ತಾ ತನ್ನ ಪುತ್ರಿಗೆ ಆಕೆಯ ಪತಿ ಮತ್ತು ಮನೆಯವರು ಸೇರಿಕೊಂಡು ಚಿತ್ರಹಿಂಸೆ ನೀಡಿದ್ದು, ಈ ಬಗ್ಗೆ ಹಲವು ಬಾರಿ ರಾಜಿ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ. ಹಲ್ಲೆಗೊಳಗಾದ ಪುತ್ರಿಯನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿದ್ದೇವೆ.ಘಟನೆಯ ಕುರಿತು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಬಲ್ಕೀಷ್ ಅವರ ತಂದೆ ಅಬ್ದುಲ್ ಖಾದರ್ ಹೇಳಿದ್ದಾರೆ.

Related posts

Leave a Reply