Header Ads
Header Ads
Header Ads
Breaking News

ಉಪ್ಪಿನಕಾಯಿ ಮಾರಾಟಗಾರರಿಗೂ ಜಿ‌ಎಸ್‌ಟಿ ಮೋದಿ ದುರಾಡಳಿತದ ವಿರುದ್ಧ ರಣಕಹಳೆ ಉಪ್ಪಳದಲ್ಲಿ ನಡೆದ ರಣಕಹಳೆ ಯಾತ್ರೆ

ಉಪ್ಪಿನ ಕಾಯಿ ಮಾರಾಟಗಾರನನ್ನೂ ಕೂಡಾ ಜಿ ಎಸ್ ಟಿ ಯೊಳಗೆ ಸೇರಿಸಿ ಅಂತವರ ಜೀವನ ಕ್ರಮಕ್ಕೇ ತಿರುಗೇಟಾದ ಮೋದಿ ಸರಕಾರಕ್ಕೂ ಅದೇ ರೀತಿ ದುರಾಡಳಿತಕ್ಕೆ ಸಾಕ್ಷಿಯಾಗುತ್ತಿರುವ ಮೋದಿ ಸರಕಾರಕ್ಕೂ ಕೇರಳ ವಿರೋಧ ಪಕ್ಷ ನಾಯಕ ರಮೇಶ್ ಚೆನ್ನಿತ್ತಲರವರ ನೇತೃತ್ವದಲ್ಲಿ ಆರಂಭಗೊಳ್ಳಲಿರುವ ರಣಕಹಳೆ ಯಾತ್ರೆ ಒಂದು ಮುನ್ನೆಚ್ಚರಿಕೆಯ ಕರೆಗಂಟೆಯಾಗಿರುವುದಾಗಿ ಮಾಜಿ ಕೇಂದ್ರ ಸಚಿವ ಎ ಕೆ ಅಂಟನಿ ಹೇಳಿದರು.

ಅವರು ಉಪ್ಪಳದಲ್ಲಿ ನಡೆದ ರಾಜ್ಯ ಮಟ್ಟದ ರಣ ಕಹಳೆ ಯಾತ್ರೆಯ ಧ್ವಜವನ್ನು ಜಾಥಾ ಲೀಡರ್ ರಮೇಶ್ ಚೆನ್ನಿತ್ತಲರವರಿಗೆ ಹಸ್ತಾಂತರಿಸಿ ಮಾತನಾಡುತಿದ್ದರು. ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿಯ ಅಧ್ಯಕ್ಷ ಎಂ.ಎಂ. ಹಸನ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಸ್ಲಿಂಲೀಗ್ ನೇತಾರ ಕುಂಞ್ಞಲಿಕುಟ್ಟಿ ಮುಖ್ಯ ಭಾಷಣ ಮಾಡಿದರು. ಜಾಥಾ ನಾಯಕ, ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕೆ.ಸಿ.ವೇಣುಗೋಪಾಲ್, ವರ್ಗೀಸ್ ಜೋರ್ಜ್, ಡಾ.ಎಂ.ಕೆ ಮುನೀರ್ ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply