Header Ads
Header Ads
Breaking News

ಉಪ್ಪೂರಿನಲ್ಲಿ ನಿರ್ಮಾಣವಾದ ಜಿಟಿಟಿಸಿ ಕೇಂದ್ರ ಸಂಸದೆಯ ಮುತುವರ್ಜಿಯಿಂದ ಆಗಿದೆ ಎಂಬುದು ಸುಳ್ಳು : ಮಾಜಿ ಸಚಿವ ಪ್ರಮೋದ್

ಉಪ್ಪೂರಿನಲ್ಲಿ ನಿರ್ಮಾಣವಾದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರವನ್ನು ಶೋಭಾ ಕರಂದ್ಲಾಜೆ ಅವರ ಶ್ರಮದಿಂದ ನಿರ್ಮಾಣವಾಗಿದೆ ಎಂಬ ಶಾಸಕ ರಘುಪತಿಭಟ್ ಅವರ ಟ್ವೀಟ್ ಹೇಳಿಕೆ ಸಂಪೂರ್ಣ ನಿರಾಧಾರ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾಖಲೆಗಳನ್ನು ಬಿಡುಗಡೆ ಮಾಡಿರುವ ಪ್ರಮೋದ್ ಮಧ್ವರಾಜ್ ಉಪ್ಪೂರಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ನಾನು ಶಾಸಕನಿರುವ ಸಂದರ್ಭದಲ್ಲಿ ಸಚಿವರು ಮತ್ತು ಇಲಾಖಾ ಮುಖ್ಯಸ್ಥರ ಮೇಲೆ ಒತ್ತಡ ತಂದು ಮಂಜೂರು ಮಾಡಿದ್ದೆ. ಈ ಕೇಂದ್ರ ಸ್ಥಾಪನೆಗೆ 10 ಎಕರೆ ಜಮೀನು ಮಂಜೂರು ಮಾಡಿ ಕೇಂದ್ರ ಸ್ಥಾಪನೆ ಯಾಗಿದೆ. ಈಗ ಶಾಸಕ ರಘುಪತಿಭಟ್ ಸಂಸದೆ ಶೋಭಾ ಅವರ ಮುತುವರ್ಜಿಯಿಂದ ಈ ಕೇಂದ್ರ ಸ್ಥಾಪನೆ ಆಗಿದೆ ಅಂತ ಹಸಿ ಸುಳ್ಳು ಹೇಳುತ್ತಿದ್ದಾರೆ. ಸುಮಾರು 48 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕೇಂದ್ರ ಸ್ಥಾಪನೆಯಾಗಿದ್ದು ಈ ಯೋಜನೆಗೆ ನಬಾರ್ಡ್- ಆರ್‍ಐಡಿಎಫ್ ಯೋಜನೆಯಡಿ ಹಣ ಮಂಜೂರಾಗಿದೆ. ಬ್ಯಾಂಕ್ ಕೇಂದ್ರದ್ದು ಎಂದು ಸಂಸದೆ ಶೋಭಾದ್ದು ವಾದವಾಗಿದೆ. ಆದ್ರೆ ಈ ಯೋಜನೆಯಲ್ಲಿ ಸಂಸದೆಯ ಪಾತ್ರ ಶೂನ್ಯ ಎಂದು ಆಪಾದಿಸಿದರು.

Related posts

Leave a Reply

Your email address will not be published. Required fields are marked *