Header Ads
Header Ads
Breaking News

ಉರ್ವಸ್ಟೋರಿನ ಜಿಲ್ಲಾಮಟ್ಟದ ಅಂಬೇಡ್ಕರ್ ಭವನ ಉದ್ಘಾಟನೆಗೆ ಸಜ್ಜು

 ಸರ್ಕಾರಿ ಕಾಮಗಾರಿಗಳು ಕುಂಟುತ್ತಾ ಸಾಗುವುದು ಸರ್ವೇ ಸಾಮಾನ್ಯ. ಆದ್ರೆ ಈ ಕಾಮಗಾರಿ ಮಾತ್ರ 4 ವರ್ಷದಲ್ಲಿಯೇ ಪೂರ್ಣಗೊಳ್ಳುತ್ತಿದೆ. ಅದು ಕೂಡ ಬರೋಬ್ಬರಿ 17.82 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರೀತಿಯಲ್ಲಿಯೇ ಭವನ ನಿರ್ಮಾಣಗೊಳ್ಳುತ್ತಿದೆ. ಹಾಗಾದ್ರೆ ಆ ಭವನ ಯಾವುದು, ಕಾಮಗಾರಿ ಚುರುಕುಮುಟ್ಟಲು ಕಾರಣವೇನು ಗೊತ್ತಾ. ಈ ಸ್ಟೋರಿ ನೋಡಿ.

ಸರ್ಕಾರಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವ ಸಾಮಾನ್ಯವಾಗಿ ಬಿಟ್ಟಿದೆ. ಒಂದು ಕಾಮಗಾರಿ ಪೂರ್ತಿಗೊಳ್ಳಬೇಕಾದ್ರೆ 8ರಿಂದ 10 ವರ್ಷಗಳೇ ಬೇಕಾಗುತ್ತೆ, ಅದ್ರೆ ಇಲ್ಲಿ ಮಾತ್ರ 3 ವರ್ಷದಲ್ಲೇ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಸದ್ಯಕ್ಕೆ ನಾವೂ ಹೇಳ್ತಾ ಇರುವುದು. ಮಂಗಳೂರಿನ ಉರ್ವಸ್ಟೋರಿನಲ್ಲಿ ಜಿಲ್ಲಾಮಟ್ಟದ ಅಂಬೇಡ್ಕರ್ ಭವನ.ಸುಮಾರು 17.82 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರೀತಿಯಲ್ಲಿಯೇ ಭವನ ನಿರ್ಮಾಣಗೊಳ್ಳುತ್ತಿದೆ. 1.61 ಎಕ್ರೆ ಜಾಗದಲ್ಲಿ ಅಂಬೇಡ್ಕರ್ ಭವನ ಸುಜ್ಜಿತವಾಗಿಯೇ ಭವನ ನಿರ್ಮಾಣ ಹಂತದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಮುಖಂಡರ ಬಹುದಿನ ಹೋರಾಟದ ಫಲವಾಗಿಯೇ ಭವ್ಯ ಕಟ್ಟಡ ಅಂತಿಮ ಹಂತದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿದೆ.ರಾಜ್ಯದ ವಿವಿಧ ಕಡೆಗಳಲ್ಲಿ ಜಿಲ್ಲಾಮಟ್ಟದ ಭವನಗಳು ಕಾರ್ಯಾರಂಭಿಸುತ್ತಿದೆ. ಅದ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಭವನ ನಿರ್ಮಾಣಕ್ಕೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತು. ಅದ್ರೆ 2012-13ರಲ್ಲಿ ಮಂಜೂರಾದ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನಕ್ಕೆ ನಾಲ್ಕು ವರ್ಷಗಳ ಬಳಿಕ 2017ರ ಜನವರಿಯಲ್ಲಿ ಶಂಕುಸ್ಥಾಪನೆ ನಡೆದಿತ್ತು. ಹಿಂದಿನ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಅಂಜನೇಯ ಅವರು ಈ ಒಂದು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆಯನ್ನ ನೆರೆವೇರಿಸಿದರು. ಹಲವಾರು ವರ್ಷಗಳ ದಲಿತ ಮುಖಂಡ ಹೋರಾಟ ಫಲವಾಗಿ ಅಂದಿನ ಸರ್ಕಾರ ಕಾಮಗಾರಿಗೆ ಚಾಲನೆಯನ್ನ ನೀಡಿತು.ಅಂಬೇಡ್ಕರ್ ಭವನ ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ಸುಮಾರು 700 ಆಸನದ ಸುಸಜ್ಜಿತ ಸಭಾಭವನ ನಿರ್ಮಾಣವಾಗಿದೆ. ಸಭಾಭವನದ ಬೃಹತ್ ವೇದಿಕೆ ಸಭೆ, ಮದುವೆ ಹಾಗೂ ಇತರ ಸಮಾರಂಭಗಳ ಜತೆಗೆ ರಂಗಚಟುವಟಿಕೆಗಳಿಗೆ ಅನುಕೂಲಕರವಾಗಿದೆ. ಸಭಾಭವನದ ಒಳಗೆ ಆಳವಡಿಸಿದ 5 ರೆಕ್ಕೆಯ ಬೃಹತ್ ಫ್ಯಾನ್ ಆಕರ್ಪಿಸುತ್ತಿದೆ.ಈಗಾಗಲೇ ಜಿಲ್ಲಾ ಪಂಚಾಯತಿ ಕಚೇರಿ ಕಟ್ಟಡದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮತ್ತು ಮಾರ್ಕೇಟ್ ರಸ್ತೆಯಲ್ಲಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕೂಡ ಇಲ್ಲಿಯೇ ಕಾರ್ಯನಿರ್ವಹಿಸಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭವನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸೌಂಡ್ ಸಿಸ್ಟಮ್ , ಸಿಸಿ ಕ್ಯಾಮರಾ ಅಳವಡಿಕೆ ಸಹಿತ ಇನ್ನಿತರ ಕಾಮಗಾರಿಗಳು ನಡೆಯುತ್ತಿದೆ.ಜಿಲ್ಲೆಯಲ್ಲಿ ರಂಗಮಂದಿರ ಕನಸಾಗಿಯೇ ಉಳಿದಿದೆ. ಅಂಬೇಡ್ಕರ್ ಭವನ ಉದ್ಘಾಟನೆಗೊಂಡ ಬಳಿಕ ಈ ಕೊರತೆ ಕೊಂಚ ನಿವಾರಣೆಯಾಗಲಿದೆ. ಈ ನಡುವೆ ರಂಗಚಟುವಟಿಕೆಗೆ ರಂಗಮಂದಿರ ದೊಡ್ಡ ಮಟ್ಟಿನಲ್ಲಿ ನಿರ್ಮಾಣವಾಗಬೇಕೆಂಬ ಒತ್ತಾಯ ಕೂಡ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಒಟ್ಟಿನಲ್ಲಿ ಹಲವು ವರ್ಷಗಳ ದಲಿತ ಮುಖಂಡರ ಹೋರಾಟದ ಫಲವಾಗಿಯೇ ಸುಸಜ್ಜಿತ ರೀತಿಯಲ್ಲಿಯೇ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದೆ.

 

Related posts

Leave a Reply

Your email address will not be published. Required fields are marked *