Header Ads
Header Ads
Breaking News

ಉರ್ವಸ್ಟೋರ್ ಜಂಕ್ಷನ್‌ನಲ್ಲಿ ರಸ್ತೆ ಅಗೆದು ಅರ್ಧಂಬರ್ಧ ಕಾಮಗಾರಿ : ಮಂಗಳೂರು ನಗರವ್ಯಾಪ್ತಿಯಲ್ಲಿ ನಡೆಯುತ್ತಿದೆ ಒಳಚರಂಡಿ ಕಾಮಗಾರಿ

ಎತ್ತ ನೋಡಿದರೂ ರಸ್ತೆ ಬದಿಯಲ್ಲಿ ಮಣ್ಣಿನ ರಾಶಿ, ನಡುರಸ್ತೆಯಲ್ಲಿ ಅಗೆದುಹಾಕಲಾದ ಹೊಂಡ ಗುಂಡಿಗಳು, ತಿಂಗಳುಗಟ್ಟಲೇ ರಾಶಿ ಬಿದ್ದಿರುವ ಮಣ್ಣಿನಿಂದಾಗಿ ಸಮಸ್ಯೆ ಅನುಭವಿಸುತ್ತಿರುವ ಜನರು, ವಾಹನ ಸವಾರರು. ಇದೆಲ್ಲಾ ಇತ್ತೀಚೆಗೆ ಮಂಗಳೂರು ನಗರದಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ದೃಶ್ಯಗಳು. ಇದಕ್ಕೆಲ್ಲಾ ಕಾರಣ ಏನು ಅಂತಾ ಕೇಳ್ತಾ ಇದ್ದೀರಾ? ಹಾಗಿದ್ರೆ ಈ ರಿಪೋರ್ಟ್ ನೋಡಿ.ಮಂಗಳೂರು ಒಂದುಕಡೆಯಿಂದ ಸ್ಮಾರ್ಟ್ ಸಿಟಿ ಆಗುವತ್ತ ದಾಪುಗಾಲಿಡುತ್ತಾ ಇರುವ ನಗರ. ಆದರೆ ಮಂಗಳೂರು ನಗರವನ್ನು ಇತ್ತೀಚೆಗೆ ಗಮನಿಸಿದಾಗ ಕಾಣಸಿಗುವುದು ಅಲ್ಲಲ್ಲಿ ಅಗೆದುಹಾಕಲಾದ ರಸ್ತೆಗಳು, ರಸ್ತೆ ಬದಿ ಹಾಕಲಾಗಿರುವ ಮಣ್ಣಿನ ರಾಶಿ. ಹೌದು, ಮಂಗಳೂರು ನಗರದ ಅಲ್ಲಲ್ಲಿ ವಿವಿಧ ಯೋಜನೆಯ ಕಾಮಗಾರಿಗಳಿಗಾಗಿ ರಸ್ತೆಂಯನ್ನು ಅಗೆಯಲಾಗಿದೆ. ಆದರೆ ಅದನ್ನು ಶೀಘ್ರ ಪೂರ್ಣಗೊಳಿಸದೇ ಇರುವುದು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದೆ.

ನೀವು ಈಗ ದೃಶ್ಯದಲ್ಲಿ ನೋಡುತ್ತಿರುವುದು ಮಂಗಳೂರಿನ ಪ್ರಮುಖ ಭಾಗವಾದ ಉರ್ವಸ್ಟೋರ್ ಪ್ರದೇಶ. ಇಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಎಡಿಬಿ ಯೋಜನೆಯಡಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಮಂಗಳೂರಿನ ಕುದ್ರೋಳಿಯಿಂದ ಉರ್ವಸ್ಟೋರ್ ಮೂಲಕ ಕಾವೂರು ಮುಲ್ಲಕಾಡುವರೆಗೆ ಹಳೆಯ ಡ್ರೈನೇಜ್ ಪೈಪ್ ತೆರವುಗೊಳಿಸಿ ಹೊಸ ದೊಡ್ಡ ಗಾತ್ರದ ಪೈಪ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಪೈಪ್ ಅಳವಡಿಕೆಗಾಗಿ ಮಂಗಳೂರಿನ ಉರ್ವಸ್ಟೋರ್ ಜಂಕ್ಷನ್‌ನಲ್ಲಿ ಮುಖ್ಯರಸ್ತೆಯನ್ನು ಅಗೆದುಹಾಕಲಾಗಿದೆ. ಆದರೆ ಹೊಂಡವನ್ನು ಮುಚ್ಚದೆ ಹಾಗೆಯೇ ಬಿಡಲಾಗಿದ್ದು, ಇದರಿಂದಾಗಿ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದು ಕೇವಲ ಉರ್ವಸ್ಟೋರ್‌ನಲ್ಲಿ ಕಂಡುಬರುತ್ತಿರುವ ಸಮಸ್ಯೆಯಲ್ಲ. ಎಡಿಬಿ ಕಾಮಗಾರಿ ಎಲ್ಲೆಲ್ಲಾ ನಡೆಯುತ್ತಿದೆಯೋ ಅಲ್ಲೆಲ್ಲಾ ಇದೇ ಸಮಸ್ಯೆ. ಅಗೆದ ರಸ್ತೆಯನ್ನು ಮತ್ತೆ ಸರಿಮಾಡದೇ ಇರುವುದರಿಂದಾಗಿ ಜನರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇನ್ನು ಕೆಲವೆಡೆ ಪೈಪ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದರೂ ರಸ್ತೆಗೆ ಮರುಡಾಮರೀಕರಣ ಅಥವಾ ಕಾಂಕ್ರಿಟೀಕರಣ ಇನ್ನೂ ಆಗಿಲ್ಲ ಅಂತಾ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅರ್ಧನಂರ್ಧ ಕಾಮಗಾರಿಗಳಿಂದಾಗಿ ಜನರು ರೋಸಿಹೋಗಿದ್ದಾರೆ. ಈ ಮೂಲಕ ರಸ್ತೆಯಲ್ಲಿ ಬಾಯ್ದೆರೆದಿರುವ ಹೊಂಡಗಳಿಗೆ ಶೀಘ್ರ ಮುಕ್ತಿ ಲಭಿಸಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Related posts

Leave a Reply