Header Ads
Header Ads
Header Ads
Breaking News

ಉರ್ವಾಸ್ಟೋರ್ ಡಿವೈಎಫ್‌ಐ ಘಟಕದಿಂದ ರಕ್ತದಾನ ಶಿಬಿರ ಆಶೋಕನಗರ ಶಾಲೆಯಲ್ಲಿ ರಕ್ತದಾನ ಶಿಬಿರ ಆಯೋಜನೆ ನೂರಾರು ಮಂದಿ ರಕ್ತದಾನದಲ್ಲಿ ಭಾಗಿ

ಮಂಗಳೂರಿನ ಉರ್ವಾಸ್ಟೋರ್ ಡಿವೈಎಫ್‌ಐ ಘಟಕ ಹಾಗೂ ಲಯನ್ಸ್ ಮತ್ತು ಲಯನೆಸ್ ಕ್ಲಬ್ , ನಗರದ ಎ.ಜೆ.ಆಸ್ಪತ್ರೆಯ ರಕ್ತನಿಧಿ ಕೇಂದ್ರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಮಂಗಳೂರಿನಲ್ಲಿ ಆಶೋಕನಗರ ಶಾಲೆಯಲ್ಲಿ ಆಯೋಜಿಸಲಾಗಿತ್ತು.

ಈ ವೇಳೆ ಡಿವೈಎಫ್‌ಐ ಮುಖಂಡ ಸಂತೋಷ್ ಬಜಾಲ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದಾನ ಪೂರೈಕೆ ಕಡಿಮೆಯಾಗುತ್ತಿರುವ ಶೋಚನೀಯ ಪರಿಸ್ಥಿತಿಯಾಗಿದೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಯುವಕರು ರಕ್ತದಾನದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.ಇದೇ ವೇಳೆ ಲಯನ್ಸ್ ಕ್ಲಬ್ ಮಿಲಾಗ್ರಿಸ್ ಅಧ್ಯಕ್ಷ ಹೇಮಾ ಶರ್ಮಾ, ಎ.ಜೆ. ಆಸ್ಪತ್ರೆ ವೈದ್ಯಾಧಿಕಾರಿ ಡಾ|ಅರವಿಂದ್, ಎ.ಎಜೆ.ಆಸ್ಪತ್ರೆಯ ರಕ್ತನಿಧಿ ಕೇಂದ್ರ ಮೇನೇಜರ್ ಪಿ.ಆರ್.ಗೋಪಾಲಕೃಷ್ಣ, ಡಿವೈಎಫ್‌ಐ ಉರ್ವಸ್ಟೋರ್ ಘಟಕ ಅಧ್ಯಕ್ಷ ಇಕ್ಬಾಲ್, ಕಾರ್ಯದರ್ಶಿ ಧನ್‌ರಾಜ್ ಮತ್ತಿತರು ಉಪಸ್ಥಿತರಿದ್ರು.

Related posts

Leave a Reply