Header Ads
Header Ads
Breaking News

ಉರ್ವಾ ಮಾರುಕಟ್ಟೆಗೆ ಶಾಸಕ ವೇದವ್ಯಾಸ್ ಕಾಮತ್ ಭೇಟಿ

ಡಿಸೆಂಬರ್ ಅಂತ್ಯದೊಳಗೆ ಉರ್ವಾ ಮಾರುಕಟ್ಟೆಯ ನೂತನ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. 

ಅವರು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರಿಗಳ ಮತ್ತು ಇತರ ವ್ಯಾಪಾರಸ್ಥರ ಬೇಡಿಕೆಗಳನ್ನು ಆಲಿಸಲು ಉರ್ವಾ ಮಾರುಕಟ್ಟೆಗೆ ಭೇಟಿಕೊಟ್ಟರು. ಮೀನು ಮಾರಾಟ ಮಾಡುವ ಮಹಿಳೆಯರು ತಮ್ಮ ಅಹವಾಲುಗಳನ್ನು ಶಾಸಕರ ಮುಂದಿಟ್ಟು ಅವುಗಳನ್ನು ಪೂರೈಸುವಂತೆ ಬೇಡಿಕೆ ಇಟ್ಟರು. ಎಲ್ಲರ ಮನವಿಗಳನ್ನು ಸ್ವೀಕರಿಸಿದ ಶಾಸಕರು ಹಸಿ ಮತ್ತು ಒಣ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಅಗತ್ಯವಾಗಿ ಬೇಕಾಗುವ ಶೌಚಾಲಯ, ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಶೀತಲೀಕರಣದ ಸಾಮಾಗ್ರಿಗಳನ್ನು ಇಡುವ ವ್ಯವಸ್ಥೆ, ತ್ಯಾಜ್ಯದ ನೀರು ಹೋಗುವ ವ್ಯವಸ್ಥೆ ಮತ್ತು ಮೀನು ಮಾರಾಟಗಾರರ ಸಹಾಯಕರಿಗೆ ಬೇಕಾಗುವ ಜಾಗದ ವ್ಯವಸ್ಥೆ ಎಲ್ಲವನ್ನು ಮಾಡಲು ಅಗತ್ಯ ರೂಪುರೇಶೆ ಸಿದ್ಧಪಡಿಸುವಂತೆ ಇಂಜಿನಿಯರ್ ಗಳಿಗೆ ಶಾಸಕರು ಹೇಳಿದರು. ಮೀನು ಮಾರಾಟ ಮಾಡುವ ಮಹಿಳೆಯರಿಗೆ ಯಾವುದೇ ತೊಂದರೆಯಾಗದಂತೆ ಶಾಸಕನ ನೆಲೆಯಲ್ಲಿ ಎಲ್ಲ ಕೆಲಸಗಳನ್ನು ಮಾಡಿಕೊಡುವುದಾಗಿ ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ಶಾಸಕರೊಂದಿಗೆ ಸ್ಥಳೀಯ ಕಾರ್ಪೋರೇಟರ್ ಜಯಂತಿ ಆಚಾರ್, ಮನಪಾ ಸದಸ್ಯ ರಾಧಾಕೃಷ್ಣ, ಬಿಜೆಪಿ ಮುಖಂಡರಾದ ವಸಂತ ಜೆ ಪೂಜಾರಿ, ಜಗದೀಶ್ ಶೆಟ್ಟಿ, ವಸಂತ ಶೇಟ್, ಪ್ರಶಾಂತ್ ಆಳ್ವ, ಮೋಹನ ಆಚಾರ್, ರಾಹುಲ್ ಶೆಟ್ಟಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Related posts

Leave a Reply