Header Ads
Header Ads
Breaking News

ಉರ್ವ ಫ್ರೆಂಡ್ಸ್ ಕಲ್ಚರಲ್ ಅಸೋಸಿಯೇಷನ್‍ನ 67ನೇ ವಾರ್ಷಿಕೋತ್ಸವ : ಕೋಡಿಕಲ್ ಫ್ರೆಂಡ್ಸ್ ಸರ್ಕಲ್‍ಗೆ ಒಲಿದ 42ನೇ ಯುಎಫ್‍ಸಿಎ ಟ್ರೋಫಿ

ಉರ್ವ ಫ್ರೆಂಡ್ಸ್ ಕಲ್ಚರಲ್ ಅಸೋಸಿಯೇಷನ್‍ನ 67ನೇ ವಾರ್ಷಿಕೋತ್ಸವ ಹಾಗೂ ದಿ.ಆರ್.ಆರ್. ಪೈ ಸ್ಮರಣಾರ್ಥ 42ನೇ ಯುಎಫ್‍ಸಿಎ ಟ್ರೋಫಿ ಹಾಗೂ 25ನೇ ದಿ. ಯು. ಶ್ಯಾಮ ಸ್ಮಾರಕ ಮಾಸ್ಟರ್ಸ್ ಕ್ರಿಕೆಟ್ ಪಂದ್ಯಾಟದ ಪ್ರಶಸ್ತಿ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮವು ಮಂಗಳೂರಿನ ಉರ್ವ ಮೈದಾನದಲ್ಲಿ ನಡೆಯಿತು. 25ನೇ ದಿ| ಯು. ಶ್ಯಾಮ ಸ್ಮಾರಕ ಮಾಸ್ಟರ್ಸ್ ಕ್ರಿಕೆಟ್ ಟ್ರೋಫಿಯನ್ನು ಓಶಿಯನ್ ಕ್ರಿಕೆಟರ್ಸ್ ಪೆರ್ಮನ್ನೂರು ತಂಡವು ತನ್ನದಾಗಿಸಿಕೊಂಡಿತು. 42ನೇ ಯುಎಫ್‍ಸಿಎ ಟ್ರೋಫಿಯನ್ನು ಕೋಡಿಕಲ್ ಫ್ರೆಂಡ್ಸ್ ಸರ್ಕಲ್ ಗೆದ್ದುಕೊಂಡಿತು.


ಮಂಗಳೂರಿನ ಉರ್ವ ಫ್ರೆಂಡ್ಸ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ನಡೆದ ದಿ.ಆರ್.ಆರ್.ಪೈ ಸ್ಮರಣಾರ್ಥ 42ನೇ ಯುಎಫ್‍ಸಿಎ ಟ್ರೋಫಿ ಮತ್ತು 25ನೇ ದಿ. ಯು.ಶ್ಯಾಮ ಸ್ಮಾರಕ ಮಾಸ್ಟರ್ಸ್ ಕ್ರಿಕೆಟ್ ಪಂದ್ಯಾಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉರ್ವದ ಮೈದಾನದಲ್ಲಿ ನಡೆಯಿತು. ಜೊತೆಗೆ ಉರ್ವ ಫ್ರೆಂಡ್ಸ್ ಕಲ್ಚರಲ್ ಅಸೋಸಿಯೇಷನ್‍ನ ವಾರ್ಷಿಕೋತ್ಸವ ಸಮಾರಂಭವೂ ನಡೆಯಿತು. ಈ ಸಂದರ್ಭದಲ್ಲಿ ಕಾಶ್ಮಿರದ ಪುಲ್ವಾಮದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟರ್‍ಗಳಾದ ಬಿ. ನಾಗೇಶ್ ಸಾಲಿಯಾನ್, ರಾಮಕೃಷ್ಣ ಬಂಗೇರ, ಶುಭಾಕರ್ ಶೆಟ್ಟಿ, ಜೀವನ್ ವಾಸ್, ಶೇಷಪ್ಪ ಮತ್ತು ಅಶೋಕ್ ಗಟ್ಟಿಯವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಕ್ರಿಕೆಟರ್ ಶುಭಾಕರ್ ಶೆಟ್ಟಿಯವರು ಅಂದಿನ ಕಾಲದಲ್ಲಿ ಯುಎಫ್‍ಸಿಎ ವತಿಯಿಂದ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುತ್ತಿದ್ದ ನೆನಪುಗಳನ್ನು ಬಿಚ್ಚಿಟ್ಟರು. ಜೊತೆಗೆ ಯುಎಫ್‍ಸಿಎನ ಆರಂಭಿಕ ಹಂತಗಳನ್ನು ಸ್ಮರಿಸಿಕೊಂಡರು.  ಈ ಸಂದರ್ಭ ಮಾತನಾಡಿದ ಗ್ಯಾಲಕ್ಸಿ ಸ್ಪೋಟ್ರ್ಸ್ ವಲ್ರ್ಡ್ ಮಾಲಕ ಸದಾನಂದ ನಾವಡ ಅವರು ಜಾತಿ ಮತ ಭೇದವಿಲ್ಲದೆ ಕ್ರಿಕೆಟ್ ಮೂಲಕ ಸಾಮಾಜಿಕ ಸಾಮರಸ್ಯ ಮೂಡಿಸಲು ಪ್ರಯತ್ನಿಸುತ್ತಿರುವ ಯುಎಫ್‍ಸಿಎ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಂದರ್ಭದಲ್ಲಿ ತೀರ್ಪುಗಾರರಿಗೆ, ಸಹಕರಿಸಿದವರಿಗೆ ಗಣ್ಯೆರು ಸ್ಮರಣಿಕೆಗಳನ್ನು ವಿತರಿಸಿದರು.  ಬಳಿಕ ವಿಜೇತ ಕ್ರಿಕೆಟ್ ತಂಡಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. 25ನೇ ದಿ| ಯು. ಶ್ಯಾ, ಸ್ಮಾರಕ ಮಾಸ್ಟರ್ಸ್ ಕ್ರಿಕೆಟ್ ಟ್ರೋಫಿಯನ್ನು ಓಶಿಯನ್ ಕ್ರಿಕೆಟರ್ಸ್ ಪೆರ್ಮನ್ನೂರು ತಂಡವು ತನ್ನದಾಗಿಸಿಕೊಂಡಿತು. ಮಜ್ದಾ ಕಣ್ಣೂರು ತಂಡವು ದ್ವಿತೀಯ ಸ್ಥಾನ ಗಳಿಸಿಕೊಂಡಿತು. ವಿಜಯಲಕ್ಷ್ಮೀ ಕ್ರಿಕೆಟರ್ಸ್‍ನ ನರೇಶ್ ಉತ್ತಮ ದಾಂಡಿಗ, ಓಶಿಯನ್ ಕ್ರಿಕೆಟರ್ಸ್‍ನ ಝಾಕಿರ್ ಉತ್ತಮ ಬೌಲರ್, ಓಶಿಯನ್ ಕ್ರಿಕೆಟರ್ಸ್‍ನ ಸಲೀಂ ಮ್ಯಾನ್ ಆಫ್ ದ ಮ್ಯಾಚ್, ಮಜ್ದಾ ಕಣ್ಣೂರು ತಂಡದ ಸಾಧಿಕ್ ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು. ಆರ್ ಆರ್ ಪೈ ಸ್ಮರಣಾರ್ಥ 42ನೇ ಯುಎಫ್‍ಸಿಎ ಟ್ರೋಫಿಯನ್ನು ಕೋಡಿಕಲ್ ಫ್ರೆಂಡ್ಸ್ ಸರ್ಕಲ್ ಪಡೆದುಕೊಂಡಿತು. ದ್ವಿತೀಯ ಪ್ರಶಸ್ತಿಯನ್ನು ವಿಜಯಲಕ್ಷ್ಮೀ ಕ್ರಿಕೆಟರ್ಸ್ ಗೆದ್ದುಕೊಂಡಿತು. ಕೆಫ್‍ಸಿಯ ಶಾಕಿರ್ ಬೆಸ್ಟ್ ಬ್ಯಾಟ್ಸ್‍ಮನ್, ಕಾರ್ತಿಕ್ ಬೆಸ್ಟ್ ಬೌಲರ್ ಪ್ರಶಸ್ತಿ ಗೆದ್ದುಕೊಂಡರು. ನೌಶಾದ್ ಪಂದ್ಯಶ್ರೇಷ್ಠ ಹಾಗೂ ಶಾಕಿರ್ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದರು. ಕಾರ್ಯಕ್ರಮದಲ್ಲಿ ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ವರ ಬರ್ಕೆ, ವಾಸ್ ಬೇಕರಿ ಮಾಲಕ ಲೀಸ್ಟರ್ ವಾಸ್, ಯುಎಫ್‍ಸಿಎ ಅಧ್ಯಕ್ಷ ವಿಠೋಭ ನುಳ್ಳಿಪ್ಪಾಡಿ, ಗೌರವಾಧ್ಯಕ್ಷ ಡಾ.ಬಿ.ಜಿ. ಸುವರ್ಣ, ಉಪಾಧ್ಯಕ್ಷ ಕಮಲಾಕ್ಷ ಕುಂದರ್, ಪ್ರಧಾನ ಕಾರ್ಯದರ್ಶಿ ಲತೀಶ್ ಕುಮಾರ್ ಯು., ವಿ4 ನ್ಯೂಸ್‍ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *