Header Ads
Breaking News

ಉರ್ವ ಮಾರಿಗುಡಿ ಮ್ಯಾಟ್ ಫ್ರೆಂಡ್ಸ್ (ರಿ) : ವಿ4 ನ್ಯೂಸ್‍ನ ಸಿಪಿಎಲ್ ಖ್ಯಾತಿಯ ರಂಜನ್ ಬೋಳೂರು ಅವರಿಗೆ ಸನ್ಮಾನ

ಉರ್ವ ಮಾರಿಗುಡಿ ಮ್ಯಾಟ್ ಫ್ರೆಂಡ್ಸ್ ರಿಜಿಸ್ಟರ್ ವತಿಯಿಂದ ಸಂಭ್ರಮ-2020 ಸಂಗೀತ ರಾಜೀವ್ ಲೈವ್ ಇನ್ ಕನ್ಸರ್ಟ್ ಅದ್ಧೂರಿಯ ಕಾರ್ಯಕ್ರಮ ಉರ್ವದ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿ4 ನ್ಯೂಸ್‍ನ ಕಾಮಿಡಿ ಪ್ರೀಮಿಯರ್ ಲೀಗ್ ಖ್ಯಾತಿಯ ರಂಜನ್ ಬೋಳೂರು ಅವರನ್ನು ಸನ್ಮಾನಿಸಲಾಯಿತು.

ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ ನಡೆದ ಸಂಭ್ರಮ -2020 ಕಾರ್ಯಕ್ರಮವನ್ನು ಉಡುಪಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‍ನ ಡಾ, ಜಿ. ಶಂಕರ್ ಸೇರಿದಂತೆ ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಉರ್ವ ಮಾರಿಗುಡಿ ಮ್ಯಾಟ್ ಫ್ರೆಂಡ್ಸ್ ಒಂದೊಳ್ಳೆಯ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಈ ಸಂಘಟನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ಹೇಳಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿ4 ನ್ಯೂಸ್‍ನ ಜನಪ್ರೀಯ ರಿಯಾಲಿಟಿ ಶೋದ ಕಾಮಿಡಿ ಪ್ರೀಮಿಯರ್ ಲೀಗ್‍ನ ಖ್ಯಾತಿಯ ರಂಜನ್ ಬೋಳೂರು ಅವರನ್ನು ನಾಟಕ ಮತ್ತು ಚಿತ್ರರಂಗದಲ್ಲಿ ಮಾಡಿದ ಸೇವೆಗಾಗಿ ಗುರುತಿಸಿ ಸನ್ಮಾನಿಸಲಾಯಿತು.

ಇದೇ ವೇಳೆ ಸಂಗೀತ ಸಂಭ್ರಮ ಕಾರ್ಯಕ್ರಮ ನೆರೆದವರನ್ನು ಮನರಂಜಿಸಿತು.ಈ ಸಂದರ್ಭ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಎಮ್, ಉರ್ವ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರರಾದ ಹರೀಶ್ವಂದ್ರ ಕರ್ಕೇರಾ, ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿಯ ಜಿಲ್ಲಾಧ್ಯಕ್ಷರಾದ ಶಾಂತರಾಮ್ ಶೆಟ್ಟಿ, ಬಿರುವ ಕುಡ್ಲದ ಸ್ಥಾಪಕರಾದ ಉದಯ ಪೂಜಾರಿ ಬಳ್ಳಾಲ್ ಭಾಗ್, ಯಶಪಾಲ್ ಸುವರ್ಣ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *