Header Ads
Breaking News

ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಆಶ್ರಯದಲ್ಲಿ ಉಳಾಯಿಬೆಟ್ಟಿನಲ್ಲಿ ರಕ್ತದಾನ ಶಿಬಿರ

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಆಶ್ರಯದಲ್ಲಿ ಎಸ್‌ಡಿಎಂಸಿ ಉಳಾಯಿಬೆಟ್ಟು ಮತ್ತು ಹಳೆ ವಿದ್ಯಾರ್ಥಿ ಸಂಘ ಉಳಾಯಿಬೆಟ್ಟು ಸಹಕಾರದೊಂದಿಗೆ ಶ್ರೀನಿವಾಸ ಆಸ್ಪತ್ರೆ ಮುಕ್ಕ, ಸುರತ್ಕಲ್ ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ಉಳಾಯಿಬೆಟ್ಟಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಿತು.
ಯಶಸ್ವಿಯಾಗಿ ನಡೆದ ರಕ್ತ ದಾನ ಶಿಬಿರದಲ್ಲಿ ಒಟ್ಟು 32ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಶ್ರೀನಿವಾಸ ಆಸ್ಪತ್ರೆ ಮುಕ್ಕ, ಸುರತ್ಕಲ್ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.ಈ ಸಂದರ್ಭ ಲಿಸ್ಟನ್ ಫೆನಾಂಡಿಸ್, ಅಬ್ದುಲ್ಲ ಕುಂಞಿ,ಕಮಲಾಕ್ಷ ತಲ್ಲಿಮಾರು, ಕೆ.ಬಿ.ಆರ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *