Header Ads
Breaking News

ಉಳಿಯಾರು ದೇವಸ್ಥಾನದಲ್ಲಿ ಯೋಗ ಶಿಬಿರಕ್ಕೆ ಚಾಲನೆ

ಕಾಪು ಸಮೀಪದ ಉಳಿಯಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ, ಪತಂಜಲಿ ಯೋಗ ಪೀಟ ಉಡುಪಿ ಇದರ ಸಹಯೋಗದಲ್ಲಿ ಪ್ರಾಣಯೋಗ ಶಿಬಿರವನ್ನು ಬಹುಭಾಷಾ ವಿಜ್ಞಾನಿ ಡಾ .ಯು. ಪಿ. ಉಪದ್ಯಾಯರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭ ಮಾತನಾಡಿದ ದೇವಳದ ಅರ್ಚಕರಾದ ಗಣಪತಿ ಭಟ್ ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಪರಿಪೂರ್ಣ ಆರೋಗ್ಯ ನಮ್ಮದಾಗಲಿದೆ, ಯುವ ಜನಾಂಗ ದುಶ್ಚಟಗಳಿಂದ ತನ್ನ ಜೀವನವನ್ನೆ ಕಳೆದು ಕೊಳ್ಳುತ್ತಿದ್ದು,ಯುವಕರ ಮನ ಪರಿವರ್ತನೆ ಯೋಗದಿಂದ ಸಾಧ್ಯ ಯೋಗ ನಮ್ಮಜೀವನಕ್ಕೆ ಮಾರ್ಗ ದರ್ಶನವನ್ನು ನೀಡುತ್ತದೆ ಎಂದರು.

ಈ ಸಂದರ್ಭ ಯೋಗ ಶಿಕ್ಷಕಿ ವಿದೀಶ ರಾವ್, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ನಾಗ ಭೂಷಣ್ ರಾವ್ , ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಅಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *