Header Ads
Header Ads
Breaking News

ಉಳಿಯ-ಅಡ್ಯಾರ್ ಸಂಪರ್ಕ ಸೇತುವೆ ಹಾನಿಗೊಳಿಸಿದ ದುಷ್ಕರ್ಮಿಗಳು

ಪಾವೂರು ಗ್ರಾಮದ ನದಿ ನಡುವಿನಲ್ಲಿರುವ ಉಳಿಯ ದ್ವೀಪದಿಂದ ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸಲು ಸ್ಥಳೀಯ ಜನರೇ ಸುಮಾರ 18ಲಕ್ಷ ರೂಪಾಯಿ ವೆಚ್ಚ ಮಾಡಿ, ಕಬ್ಬಿಣದ ಪೈಪ್ ಮತ್ತು ಮರದ ಹಲಗೆಯಿಂದ ರಚಿಸಿದ ಸೇತುವೆಯನ್ನು ಕೆಲವು ದಷ್ಕರ್ಮಿಗಳು ನಾಶಗೊಳಿಸಿದ ಪ್ರದೇಶಕ್ಕೆ ಜಾತ್ಯಾತೀತ ಜನತಾದಳದ ಮಂಗಳೊರು ಕ್ಷೇತ್ರ ಸಮಿತಿಯ ನಿಯೋಗ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳೀಯರ ಈ ರಚನಾತ್ಮಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಿಯೋಗ ಸೇತುವೆಗೆ ಹಾನಿಗೊಳಿಸಿದ ದುಷ್ಕೃತ್ಯವನ್ನು ಖಂಡಿಸಿದೆ. ಸೇತವೆಗೆ ಹಾನಿಮಾಡಿದ ದುಷ್ಕರ್ಮಿಗಳನ್ನ ಪತ್ತೆಹಚ್ಚಿ ಶಿಕ್ಷಿಸಬೇಕು. ಈ ಪ್ರದೇಶದ ಮತ್ತು ಜನರ ಸುರಕ್ಷೆತೆಗಾಗಿ ತಡೆಗೋಡೆಗಳನ್ನು ರಚಿಸಬೇಕು. ಪ್ರವಾಸೋಧ್ಯಮ ಧೃಷ್ಟಿಯಿಂದ ಈ ಪ್ರದೇಶವನ್ನು ಅಭಿವೃಧ್ಧಿಗೊಳಿಸಬೇಕೆಂಬ ಸರಕಾರವನ್ನು ಒತ್ತಾಯಿಸುವ ಭರವಸೆಯನ್ನು ನೀಡಿದರು.
ನಿಯೋಗದಲ್ಲಿ ರಾಜ್ಯ ಜನತಾದಳ ನಾಯಕರುಗಳಾದ ಹಾಜಿ ಅಬೂಬಕ್ಕರ್ ನಾಟೆಕಲ್. ನಝೀರ್ ಉಳ್ಳಾಲ್, ಕ್ಷೇತ್ರ ಕಾರ್ಯದರ್ಶಿ, ಮಾಜಿ ಕೌನ್ಸಿಲರ್ ಯು.ಯಚ್. ಫಾರೂಕ್ ಮತ್ತಿರರು ಹಾಜರಿದ್ದರು.

Related posts

Leave a Reply