Header Ads
Header Ads
Breaking News

ಉಳಿಯ ಅಡ್ಯಾರ್ ಸೇತುವೆ ಧ್ವಂಸ

ನೇತ್ರಾವತಿ ತಟದ ಪಾವೂರು ಉಳಿಯ ದ್ವೀಪವನ್ನು ಮಂಗಳೂರಿಗೆ ಸಂಪರ್ಕಿಸುವ ಅಡ್ಯಾರ್ ಬಳಿಯ ಸೇತುವೆ ಉದ್ಘಾಟನೆಯಾಗಿ ವಾರ ಕಳೆಯುವುದರೊಳಗೆ ಅದಕ್ಕೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. 

18 ಲಕ್ಷ ರೂ. ವೆಚ್ಚದಲ್ಲಿ ಸ್ಥಳೀಯ ಚರ್ಚ್‌ನ ಧರ್ಮಗುರುವಿನ ನೇತೃತ್ವ ದಲ್ಲಿ ದಾನಿಗಳ ನೆರವಿನಿಂದ ಸೇತುವೆ ನಿರ್ಮಿಸಲಾಗಿತ್ತು. ಸೇತುವೆಯಲ್ಲಿ ನಡೆದುಕೊಂಡು ಹೋಗಲು ಹಾಕಿದ್ದ ಮರದ ಹಲಗೆ ಗಳನ್ನು ಕಿಡಿಗೇಡಿಗಳು ನದಿಗೆ ಎಸೆದಿದ್ದು ಕಬ್ಬಿಣದ ರಾಡ್‌ಗಳಿಗೂ ಹಾನಿ ಮಾಡಿದ್ದಾರೆ. ಜತೆಗೆ ಉಳಿಯ ನಿವಾಸಿಗಳು ಅಡ್ಯಾರ್ ಬಳಿ ನೇತ್ರಾವತಿ ತಟದಲ್ಲಿ ನಿಲ್ಲಿಸಿದ್ದ ಒಂದು ರಿಕ್ಷಾ, ಮೂರು ಮೋಟಾರ್ ಸೈಕಲ್‌ಗಳಿಗೆ ಹಾನಿ ಮಾಡಿದ್ದಾರೆ.
ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ. ಆರ್. ಸುರೇಶ್, ಎಸಿಪಿ ರಾಮರಾವ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply