Header Ads
Breaking News

ಉಳ್ಳಾಲದಲ್ಲಿ ಅಟೋ ಕೇರ್ ಸಿಟಿ ಸಂಸ್ಥೆ ಶುಭಾರಂಭ

ಕುತ್ತಾರಿನ ಪಂಡಿತ್ ಹೌಸ್‍ನಲ್ಲಿ ಅಟೋ ಕೇರ್ ಸಿಟಿ ವಾಹನಗಳ ರಿಪೇರಿ ನಿರ್ವಹಣೆ ಮತ್ತು ಸರ್ವಿಸ್ ಸಂಸ್ಥೆ ಶುಭಾರಂಭಗೊಂಡಿತು.25ವರ್ಷ ಗ್ಯಾರೇಜ್ ಕ್ಷೇತ್ರದಲ್ಲಿ ಅನುಭವ ಇರುವ ಯು.ಬಿ ಅಬ್ದುಲ್ಲಾ ಮಾಲಕತ್ವದ ಅಟೋ ಕೇರ್ ಸಿಟಿ ಸಂಸ್ಥೆಯನ್ನು ಶಾಸಕ ಯು.ಟಿ ಖಾದರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಉಳ್ಳಾಲ ಕ್ಷೇತ್ರ ದಿನದಿಂದ ದಿನಕ್ಕೆ ಅಭಿವೃದ್ದಿ ಹೊಂದುತ್ತಿದ್ದು ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ವಾಹನಗಳ ನಿರ್ವಹಣಾ ಸಂಸ್ಥೆಯ ಪಂಡಿತ್ ಹೌಸ್ ಪ್ರದೇಶಕ್ಕೆ ಅಗತ್ಯವಿತ್ತು ಎಂದು ಹೇಳಿದರು.ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಮತ್ತು ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಶುಭಹಾರೈಸಿದರು.ಅಟೋ ಕೇರ್ ಸಿಟಿ ಸಂಸ್ಥೆಯ ಮಾಲಕರಾದ ಯು.ಬಿ ಅಬ್ದುಲ್ಲಾ ರವರು ಸೌದಿ ಅರೇಬಿಯಾದಲ್ಲಿ ಸುಮಾರು 25ವರ್ಷಗಳಿಂದ ಗ್ಯಾರೇಜ್ ಕ್ಷೇತ್ರದಲ್ಲಿ ಅನುಭವಿದ್ದು ಕಾರ್ ವಾಶ್, ಡೆಂಟಿಂಗ್, ಪೈಟಿಂಗ್, ಫ್ವಾಲಿಶಿಂಗ್, ಮುಂತಾದ ವಾಹನದ ಎಲ್ಲಾ ರಿತೀಯ ಸೇವೆಯನ್ನು ಮಿತ ದರದಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದಾರೆ.ಸಿಪಿಎಂ ಉಳ್ಳಾಲ ವಲಯ ಸಮಿತಿಯ ಕಾರ್ಯದರ್ಶಿ ಕೆ.ಕೃಷ್ಣಪ್ಪ ಸಲ್ಯಾನ್, ಉದ್ಯಮಿ ಹಾಜಿ ಮೊಹಮ್ಮದ್ ಪರಪ್ಪು, ಹೆಲ್ಪ್ ಇಂಡಿಯಾ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ರಾಝೀಕ್ ಉಳ್ಳಾಲ್ ಮುಖ್ಯ ಅತಿಥಿಗಳಾಗಿದರು.ಹಾಜಿ ಯು.ಪಿ ಅಬ್ಬಾಸ್, ಯು.ಪಿ ಸುಲೈಮಾನ್ ಶೆಖ್, ಅಸ್ಗರ್ ಅಲಿ, ಸಫೀರ್ ಹುಸೈನ್, ಹರ್ಷದ್ ಉಪಸ್ಥಿತರಿದರು.

Related posts

Leave a Reply

Your email address will not be published. Required fields are marked *