Header Ads
Breaking News

ಉಳ್ಳಾಲದಲ್ಲಿ ಈವರೆಗೆ 109 ಮಂದಿಯಲ್ಲಿ ಸೋಂಕು ಪತ್ತೆ

ಉಳ್ಳಾಲ ವ್ಯಾಪ್ತಿಯಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಿಸಿಬಿ ಪೋಲೀಸ್, ಉಳ್ಳಾಲ ನಗರಸಭೆ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಹಾಗೂ ಉಳ್ಳಾಲ ನಗರಸಭೆ ಕಾವಲುಗಾರ ಸೇರಿದಂತೆ ಒಟ್ಟು 38 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಲ್ಲಿ ಉಳ್ಳಾಲದಲ್ಲಿ ನಡೆದ ಯಾರ್ಂಡಂ ಪರೀಕ್ಷೆಗೆ ಒಳಪಟ್ಟ 28 ಮಂದಿಯಲ್ಲಿ ಪತ್ತೆಯಾಗಿದೆ. ಈ ಮೂಲಕ ಜೂ.23 ರಿಂದ 10 ದಿನಗಳವರೆಗೆ ಉಳ್ಳಾಲದಲ್ಲಿ 109 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಉಳ್ಳಾಲ ನಗರಸಭೆ ಸದಸ್ಯ ಹಾಗೂ ಕಾವಲುಗಾರನಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ನಗರಸಭೆ ಕಚೇರಿಯ ಕೆಲಸಗಳನ್ನು ಶುಕ್ರವಾರ ಬೆಳಗ್ಗಿನಿಂದಲೇ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರ ಪ್ರವೇಶವನ್ನು ನಿಬರ್ಂಧಿಸಲಾಗಿದೆ. ಮುಂದಿನ ಮಂಗಳವಾರದವರೆಗೆ ಕಚೇರಿ ಕಾರ್ಯ ನಡೆಸದೆ ಬಳಿಕ ಸ್ಯಾನಿಟೈಸ್ ನಡೆಸಿ ಕಾರ್ಯಾರಂಭಗೊಳ್ಳಲಿದೆ ಅನ್ನುವ ಮಾಹಿತಿ ಇದೆ. ಜೂ.23 ರಂದು ಕೊರೊನಾದಿಂದ ಮಹಿಳೆ ಸಾವನ್ನಪ್ಪಿದ್ದ ಬೆನ್ನಲ್ಲೇ ಉಳ್ಳಾಲದಲ್ಲಿ ಹಲವರಲ್ಲಿ ಸೋಂಕು ದೃಢವಾಗಿತ್ತು. ಇದರಿಂದ ಆರೋಗ್ಯ ಅಧಿಕಾರಿಗಳು 120 ಮಂದಿಯಲ್ಲಿ ಯಾರ್ಂಡಂ ಪರೀಕ್ಷೆಯನ್ನು ನಡೆಸಿದ್ದರು. ಈ ಪೈಕಿ 28 ಮಂದಿಯಲ್ಲಿ ಸೋಂಕು ಇರುವ ಕುರಿತು ವರದಿ ಬಂದಿದೆ. ಇದು ಉಳ್ಳಾಲದ ಜನತೆಯನ್ನು ಆತಂಕಕ್ಕೆ ದೂಡಿದೆ.

Related posts

Leave a Reply

Your email address will not be published. Required fields are marked *