Breaking News

ಉಳ್ಳಾಲದಲ್ಲಿ ಮತ್ತೆ ಪರಿಸ್ಥಿತಿ ಉದ್ವಿಗ್ನ, ಮಸೀದಿಯಲ್ಲೇ ಸಮಿತಿ ಸದಸ್ಯನ ಮೇಲೆ ಹಲ್ಲೆ


ಉಳ್ಳಾಲದಲ್ಲಿ ರಂಝಾನ್ ಆಚರಣೆಯ ದಿನದ ವಿವಾದಕ್ಕೆ ಸಂಬಂಧಿಸಿ ಮತ್ತೆ ಸೈಯ್ಯಿದ್ ಮದನಿ ದರ್ಗಾದಲ್ಲಿ ಈದ್ ನಮಾಜಿಗೆ ಆಡಳಿತ ಮಂಡಳಿ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ತಂಡವೊಂದು ಆಡಳಿತ ಸಮಿತಿ ಸದಸ್ಯ ಸೇರಿದಂತೆ ದರ್ಶನಕ್ಕೆ ಬಂದಿದ್ದ ಯುವಕನ ಮೇಲೆ ಹಲ್ಲೆಗೈದಿರುವ ಘಟನೆ ನಡೆದಿದೆ.
ಇನ್ನು ಈ ವೇಳೆ ಗಲಾಟೆಯವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಹಾಗೂ ಒಂದು ಅಕ್ರಮ ಪ್ರವೇಶ ಸೊತ್ತುಗಳಿಗೆ ಹಾನಿ ಕುರಿತು ಪ್ರಕರಣ ದಾಖಲಾಗಿದೆ. ಈ ವೇಳೆ ಸದಸ್ಯ ಮಹಮ್ಮದ್ ಅಳೇಕಲ ಎಂಬವರನ್ನು ಸುಮಾರು ೩೦ ಜನರ ಗುಂಪು ಯದ್ವಾತದ್ವ ಥಳಿಸಿದ್ದು, ಇದನ್ನು ತಡೆಯಲು ಬಂದ ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್ ರಿಲ್ವಾನ್ ಎಂಬವರ ಮೇಲೂ ತಂಡ ಮುಗಿಬಿದ್ದು ಗಂಭೀರವಾಗಿ ಹಲ್ಲೆ ನಡೆಸಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Related posts

Leave a Reply