Header Ads
Header Ads
Header Ads
Breaking News

ಉಳ್ಳಾಲದಲ್ಲಿ ವಿವಿಧ ಆರೋಪದ ಆರೋಪಿಗಳ ಬಂಧನ ಐದು ಮಂದಿಗೆ 15 ದಿನಗಳ ನ್ಯಾಯಾಂಗ ಬಂಧನ

 

ಉಳ್ಳಾಲ: ಯೆನೆಪೋಯ ಆಸ್ಪತ್ರೆಗೆ ಸಂಬಂಧಿಸಿದ ಎಂಟು ಕಾರುಗಳನ್ನು ಪುಡಿಗೈದ ತಂಡ ಮತ್ತು ದರೋಡೆ ಸಹಿತ ಹಿಂದು ಯುವಕರ ಕೊಲೆಗೆ ಯತ್ನಿಸಿದ ಐದು ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಾಡಿಗೆಗೆ ಪಡೆದಿದ್ದ ಜಾಗದಲ್ಲಿ ನಿಲ್ಲಿಸಲಾಗಿದ್ದ ಎಂಟು ಕಾರುಗಳನ್ನು ಪುಡಿಗೈದ ಮದನಿನಗರದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕುತ್ತಾರು ಕಡೆಯಿಂದ ರಾಣಿಪುರ ಕಡೆಗೆ ಹಾದುಹೋಗುವ ಒಬ್ಬಂಟಿ ಬೈಕ್ ಸವಾರರನ್ನು ಮತ್ತು ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ನಿರ್ಜನ ಸ್ಥಳದಲ್ಲಿ ತಡೆದು ಚಿನ್ನಾಭರಣ, ಸೊತ್ತುಗಳನ್ನು ಲೂಟಿಗೈಯ್ಯಲು ಸಂಚು ರೂಪಿಸಿದ್ದಾರೆಂದು ತಿಳಿದುಬಂದಿದೆ.

ಕುತ್ತಾರು ಸಮೀಪ ಗಂಗಾಧರ್ ಎಂಬವರಿಗೆ ಹಲ್ಲೆ, ಪಂಡಿತ್ ಹೌಸ್ ಮೊಬೈಲ್ ಅಂಗಡಿ ಕಳವು, ಕುತ್ತಾರು ಬೇಕರಿ ಅಂಗಡಿ ಕಳವು ನಡೆಸಿದ ಪ್ರಮುಖ ಆರೋಪಿಗಳಾಗಿದ್ದಾರೆ. ದರೋಡೆ ನಡೆಸುವ ಉದ್ದೇಶದಿಂದಲೇ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಗಾಜನ್ನು ಪುಡಿಗೈದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಎಲ್ಲರೂ ಹಿಂದಿನಿಂದಲೂ ಕಳವು ಸಹಿತ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಿಂದೆ ಮೊಗವೀರಪಟ್ನ ರಾಜು ಕೋಟ್ಯಾನ್ ಹತ್ಯೆಗೆ ಪ್ರತೀಕಾರವಾಗಿ ತೊಕ್ಕೊಟ್ಟುವಿನಲ್ಲಿ ನಡೆದ ಸಫ್ವಾನ್ ಕೊಲೆಗೆ ಪ್ರತೀಕಾರ ತೀರಿಸುವ ಸಲುವಾಗಿ ಇದೇ ತಂಡ ಕುತ್ತಾರು ಮತ್ತು ಅಂಬ್ಲಮೊಗರು ನಿವಾಸಿ ಕ್ರಿಮಿನಲ್ ಓರ್ವನನ್ನು ಹತ್ಯೆಗೈಯ್ಯುವ ಸಂಚು ರೂಪಿಸಿತ್ತು. ಆದರೆ ಪೊಲೀಸರ ಪತ್ತೆ ಕಾರ್‍ಯಾಚರಣೆಯಿಂದ ಕೊಲೆ ತಪ್ಪಿದಂತಾಗಿದೆ.

ಆರೋಪಿಗಳಿಂದ ತಲವಾರು, ಮೆಣಸಿನ ಹುಡಿ, ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ.

ದಕ್ಷಿಣ ವಿಭಾಗದ ಎಸಿಪಿ ಕೆ.ರಾಮರಾವ್ ನೇತೃತ್ವದಲ್ಲಿ ನಡೆದ ಕಾರ್‍ಯಾಚರಣೆಯಲ್ಲಿ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಕೆ.ಆರ್ ಮತ್ತು ಉಪನಿರೀಕ್ಷಕ ರಾಜೇಂದ್ರ ಬಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ವರದಿ: ಆರೀಪ್ ಉಳ್ಳಾಲ

Related posts

Leave a Reply