Header Ads
Breaking News

ಉಳ್ಳಾಲದಲ್ಲಿ 85ರಷ್ಟು ಕೊರೊನಾ ಪ್ರಕರಣ ಬರುವ ಸಾಧ್ಯತೆ ಇದೆ- ಶಾಸಕ ಖಾದರ್

ಉಳ್ಳಾಲ ವ್ಯಾಪ್ತಿಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಜಾಸ್ತಿಯಾಗಿತ್ತು. ಈ ದೃಷ್ಟಿಯಿಂದ ಮಾಜಿ ಸಚಿವ ಯು.ಟಿ ಖಾದರ್ ಸೂಚನೆಯಂತ ಉಳ್ಳಾಲ ವ್ಯಾಪ್ತಿಯಲ್ಲಿ ರ್‍ಯಾಂಡಮ್ ಟೆಸ್ಟ್ ಮಾಡಲು ಸೂಚನೆ ನಿಡಿದ್ರು. ರ್ಯಾಂಡಮ್ ಟೆಸ್ಟ್‍ನಲ್ಲಿ ಹಲವರಿಗೆ ಕೊರೊನಾ ಪಾಸಿಟಿವ್ ಇರೋದು ಪತ್ತೆಯಾಗಿತ್ತು. ಈ ಬಗ್ಗೆ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯಿಸಿ, ಉಳ್ಳಾಲ ಭಾಗದಲ್ಲಿ 400 ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. 85 ರಷ್ಟು ಪಾಸಿಟಿವ್ ಸಾಧ್ಯತೆಯಿವೆ. ಕುಟುಂಬಸ್ಥರಿಗೆ ಹರಡದಂತೆ ಜಾಗೃತಿ ಹಾಗೂ ವೈರಸ್ ಕುರಿತು ಜಾಗೃತಿ ಮಾಡಿಸುವ ಉದ್ದೇಶದಿಂದ ಕ್ರಮಕೈಗೊಳ್ಳಲಾಗಿದೆ. ಪಾಸಿಟಿವ್ ಬಂದವರು ಗಾಬರಿ ಪಡದಿರಿ. 10 ದಿನಗಳ ಕಾಲ ಅಂತರ ಕಾಪಾಡಿಕೊಂಡು ಇದ್ದಲ್ಲಿ ಗುಣಮುಖರಾಗುತ್ತಾರೆ. ರ್ಯಾಂಡಂ ಟೆಸ್ಟ್ ಮಾಡದೇ ಇದ್ದ ಪ್ರದೇಶಗಳಲ್ಲಿ ಡೆತ್ ರೇಟ್ ಜಾಸ್ತಿಯಾಗುವ ಸಾಧ್ಯತೆ ಇದೆ. ಔಟ್ ಬ್ರೇಕ್ ತಪ್ಪಿಸುವ ಸಲುವಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಧರ್ಮೀಯರು, ವರ್ತಕರು, ರಿಕ್ಷಾ ಚಾಲಕರು ಸ್ವಯಂ ಪ್ರೇರಿತ ಬಂದ್ ನಡೆಸುವುದರ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲ ಜನಜಾಗೃತಿಯ ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.

Related posts

Leave a Reply

Your email address will not be published. Required fields are marked *