Header Ads
Header Ads
Breaking News

ಉಳ್ಳಾಲದ ಅಭಿವೃದ್ಧಿಗೆ ಸಚಿವ ಖಾದರ್‌ರಿಂದ ಹಣ ಬಿಡುಗಡೆ,ಅನುದಾನ ಬಿಡುಗಡೆಯ ದಾಖಲೆ ಕೊಡಿ:ಸಂತೋಷ್ ಶೆಟ್ಟಿ ಸವಾಲು

ಉಳ್ಳಾಲ ಸಾರಸ್ವತ ಕಾಲನಿ, ಓವರ್ ಬ್ರಿಡ್ಜ್ ರಸ್ತೆ ಅಭಿವೃದ್ಧಿಗೆ ಸಚಿವ ಯು.ಟಿ.ಖಾದರ್ ಬಿಡುಗಡೆಗೊಳಿಸಿದ ಮೂರು ಕೋಟಿ ಅನುದಾನ ಕೇಂದ್ರ ಸರ್ಕಾರದ್ದೆಂದು ಬಿಂಬಿಸಿ ಪ್ರಧಾನಿ ಮತ್ತು ಸಂಸದರ ಭಾವಚಿತ್ರವುಳ್ಳ ಕಟೌಟ್ ಹಾಕಲಾಗಿದ್ದು, ಬಿಜೆಪಿ ಮುಖಂಡರಿಗೆ ಮಾನ, ಮರ್ಯಾದೆ ಇದ್ದಲ್ಲಿ ದಾಖಲೆಗಳನ್ನು ನೀಡಿ ಎಂದು ಉಳ್ಳಾಲಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಸವಾಲುಹಾಕಿದ್ದಾರೆ.

ಹಿಂದೆ ಕೊಂಡಾಣದಲ್ಲೂ ಯು.ಟಿ.ಖಾದರ್ ನೀಡಿದ್ದ ಅನುದಾನ ಕೇಂದ್ರ ಸರ್ಕಾರದ್ದೆಂದು ಹೇಳಿಕೆ ನೀಡಿ ಕಾಮಗಾರಿ ನಿಲ್ಲಿಸಿದಾಗ ತಪ್ಪು ಒಪ್ಪಿದ್ದರು. ಈ ರಸ್ತೆ ಕಾಮಗಾರಿ ಸಂದರ್ಭ ವಿದಾನಸಭೆ ಚುನಾವಣೆ ಇತ್ತು. ಈಗ ಲೋಕಸಭಾ ಚುನಾವಣಾ ದೃಷ್ಟಿಯಿಂದ ರಾಜಕೀಯ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಪ್ರದಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಉಪಾಧ್ಯಕ್ಷ ಸುರೇಶ್ ಭಟ್ನಗರ, ಹಿಂದುಳಿದ ವಿಭಾಗ ಅಧ್ಯಕ್ಷ ದಿನೇಶ್ ಕುಂಪಲ, ಮಹಿಳಾ ಘಟಕಾಧ್ಯಕ್ಷೆ ದೇವಕಿ ಪೂಜಾರಿ, ಉಮೇಶ್ ಗಾಂಭೀರ್, ದೀಪಕ್ ಪಿಲಾರ್ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply