Header Ads
Breaking News

ಉಳ್ಳಾಲದ ಪಾವೂರು ಗ್ರಾ.ಪಂ ಕಳ್ಳಾಜೆ ರಸ್ತೆ ಅಭಿವೃದ್ಧಿ : ಶಾಸಕ ಖಾದರ್‍ರಿಂದ ಶಿಲಾನ್ಯಾಸ

ಪಾವೂರು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ಅಭಿವೃದ್ಧಿ ಹೊಂದಿದ ಗ್ರಾಮದ ಶಾಲೆ, ಅಡ್ಡರಸ್ತೆಗಳು ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದ್ದು, ಬಹುತೇಕ ಕಾಮಗಾರಿಗಳು ಪೂರ್ಣವಾಗಿದೆ ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು.

ಅವರು ಶಾಸಕರ ರೂ. 8 ಲಕ್ಷ ಅನುದಾನದಡಿ ನಿರ್ಮಾಣವಾಗಲಿರುವ ಪಾವೂರು ಗ್ರಾಮದ ಕಳ್ಳಾಜೆ ರಸ್ತೆ ಅಭಿವೃದ್ಧಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು. ಪಾವೂರು ಗ್ರಾ.ಪಂ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ. ಪಾವೂರು ಗ್ರಾಮದಾದ್ಯಂತ 2.5 ಕೋಟಿ ಅನುದಾನದಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅಡ್ಡರಸ್ತೆಗಳು ಸಂಪೂರ್ಣ ಅಭಿವೃದ್ಧಿ ಹೊಂದಿದ್ದು, ಉಳಿದ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರು ಸ್ಪಂಧಿಸಬೇಕು ಎಂದರು.

ಈ ಸಂದರ್ಭ ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಪಾವೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಪಂ. ಮಾಜಿ ಸದಸ್ಯ ಚಕ್ಕರ್ ಮೋನಾಕ, ಯುವ ಕಾಂಗ್ರೆಸ್ ಕ್ಷೇತ್ರ ಉಪಾಧ್ಯಕ್ಷ ರಿಯಾಝ್ ಅಹಮ್ಮದ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *