Header Ads
Header Ads
Breaking News

ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಉಳ್ಳಾಲ: ಸರಕಾರದ ನಿರಂತರ ಪರಿಶ್ರಮದ ಫಲವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮ ನಾಡಹಬ್ಬದ ರೂಪವನ್ನು ಪಡೆದಿದ್ದು, ಈ ಮೂಲಕ ಮನೆ ಮನೆಗಳಲ್ಲಿ ಜಾಗೃತ ಧೀಕ್ಷೆಯಂತೆ ಮಕ್ಕಳಿಗೆ ಲಸಿಕೆ ಹಾಕುವುದರ ಮೂಲಕ ಆಚರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಹಾಗೂ ಉಳ್ಳಾಲ ನಗರಸಭೆ ಸದಸ್ಯ ಫಾರುಕ್ ಉಳ್ಳಾಲ್ ಹೇಳಿದ್ದಾರೆ.

ಅವರು ಉಳ್ಳಾಲದ ಯುನೈಟೆಡ್ ಸೋಷಿಯಲ್ ಮೂವ್‌ಮೆಂಟ್ ಟ್ರಸ್ಟ್ , ಪ್ರಾಥಮಿಕ ಆರೋಗ್ಯ ಕೇಂದ್ರ ಉಳ್ಳಾಲ ಇದರ ಜಂಟಿ ಆಶ್ರಯದಲ್ಲಿ ಭಾನುವಾರ ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ-2018 ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪೋಲಿಯೋದಿಂದ ಶಿಶು ಮರಣಗಳಿಗೆ ಕಾರuವಾದ ದಿನಗಳಿತ್ತು. ಈಗಲೂ ಅಂತಹ ಮಕ್ಕಳು ಕಷ್ಟದ ಬಾಳನ್ನು ಅನುಭವಿಸುತ್ತಿದ್ದಾರೆ. ಆದರೆ ಸರಕಾರದ ಶ್ರಮದ ಫಲವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಹಿಂದೆ ಸಚಿವ ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾದ ಸಂದರ್ಭ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ಹಾಗೂ ಉತ್ಸಾಹವನ್ನು ತೋರಿದ ಫಲವಾಗಿ ರಾಜ್ಯದಾದ್ಯಂತ ಇಂದು ನಾಡಹಬ್ಬ ರೀತಿಯಲ್ಲಿ ಆಚರಿಸಲಾಗುತ್ತಿದೆ. ಶುಶ್ರೂಷಕಿಯರು ಮಕ್ಕಳಿಗೆ ಲಸಿಕೆ ಕೊಡುವ ರೀತಿ ಆರೈಕೆಯಿಂದಿರಲಿ ಎಂದರು.
ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು ಇವರು ಸಲ್ಮಾ ನಫೀಸಾ ಅನ್ನುವ ಮಗುವಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಳ್ಳಾಲದ ಯುನೈಟೆಡ್ ಸೋಷಿಯಲ್ ಮೂವ್‌ಮೆಂಟ್ ಟ್ರಸ್ಟ್ ಇದರ ಅಧ್ಯಕ್ಷ ಅಹಮ್ಮದ್ ಬಾವಾ ಕೊಟ್ಟಾರ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರುಗಳಾದ ಮುಸ್ತಾಫ ಅಬ್ದುಲ್ಲಾ, ಬಾಝಿಲ್ ಡಿಸೋಜ, , ಹೈದರ್ ಉಳ್ಳಾಲ್, ಇಮ್ತಿಯಾಝ್, ಇಬ್ರಾಹಿಂ ಮುಕ್ಕಚ್ಚೇರಿ, ಹನೀಫ್ ಕೋಡಿ, ರಝಾಕ್ ಹರೇಕಳ, ಮೊಗವೀರ ಮುಖಂಡ ಬಾಬು ಸುವರ್ಣ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಬಿ.ಎಂ ಬದ್ರುದ್ದೀನ್, ಯು.ಎನ್. ಇಬ್ರಾಹಿಂ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಶಾಂತ್ ಉಪಸ್ಥಿತರಿದ್ದರು.

Related posts

Leave a Reply