Header Ads
Header Ads
Header Ads
Breaking News

ಉಳ್ಳಾಲದ ಶ್ರೀ ರಾಜರಾಜೇಶ್ವರಿ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಜರುಗಿದ ದೀಪೋತ್ಸವ

ಉಳ್ಳಾಲ: ಶ್ರೀ ರಾಜರಾಜೇಶ್ವರಿ ಸಿದ್ಧಿ ವಿನಾಯಕ ದೇವಸ್ಥಾನದ ಕ್ಷೇತ್ರದಲ್ಲಿ ದೇವರ ಸವಾರಿ ಬಲಿ ಉತ್ಸವ ಹಾಗೂ ದೀಪೋತ್ಸವ ರಾಜರಾಜೇಶ್ವರಿ ಸಿದ್ಧಿ ವಿನಾಯಕ ಕ್ಷೇತ್ರದಲ್ಲಿ ಧಾರ್ಮಿಕ ವಿಧಾನಗಳೊಂದಿಗೆ ನೆರವೇರಿತು. ನಾಲ್ಕು ದಿನಗಳ ಕಾಲ ಕ್ಷೇತ್ರದ ನಾಲ್ಕು ಭಾಗಗಳಲ್ಲಿ ದೇವರ ಸವಾರಿ ಬಲಿ ನಡೆಯಿತು. ಕ್ಷೇತ್ರದಲ್ಲಿ ತಂತ್ರಿ ಸುಬ್ರಮಣ್ಯ ಬಾಶ್ರೀತಾಯ ಮತ್ತು ವಿಜಯ ನಾವುಡ ನೇತೃತ್ವದಲ್ಲಿ ಸ್ವಸ್ತಿ, ಪುಣ್ಯಾಹ ವಾಚಣ, ಗಣಯಾಗ, ಯಾತ್ರಾಹೋಮ, ಕಲಶಾರಾಧನೆ, ಕಲಶಾಭಿಷೇಕ, ಮಹಾ ಪೂಜೆ, ದೀಪಾರಾಧನೆ ಮುಂತಾದ ವಿಶೇಷ ಪೂಜೆಗಳು ನೆರವೇರಿತು. ಭಕ್ತಾಧಿಗಳು ಶ್ರೀ ದೇವರ ಕೃಪೆಗೆ ಪಾತ್ರರಾಗಿ ದೇವರ ಪ್ರಸಾದ ಸ್ವೀಕರಿಸಿದರು. ಶ್ರೀ ರಾಜರಾಜೇಶ್ವರಿ ಸಿದ್ಧಿ ವಿನಾಯಕ ದೇವಸ್ಥಾನದ ಕ್ಷೇತ್ರದ ಗೌರವಾಧ್ಯಕ್ಷ ರಾಮಕೃಷ್ಟ ಕೈಯಂಗಳ, ಅಧ್ಯಕ್ಷ ವಾಸು ಪೂಜಾರಿ, ಉಪಾಧ್ಯಕ್ಷ ಈಶ್ವರ್ ಬಡಾಜೆ, ಪ್ರ.ಕಾರ್ಯದರ್ಶಿ ಪುಷ್ಪರಾಜ್ ಸನಿಲ್ , ಕಾರ್ಯದರ್ಶಿ ಸುರೇಶ್ ಮುಂಡೋಳಿ, ಕೋಶಾಧಿಕಾರಿ ಜಗನಾಥ್ ಸಲ್ಯಾನ್,ಸಂಘಟನಾ ಕಾರ್ಯದರ್ಶಿ ಜೆ.ಕೆ ರೈ, ಸದಸ್ಯರಾದ ಪವಿತ್ರ ಕುಮಾರ್ ಗಟ್ಟಿ, ಚಂದ್ರಹಾಸ್ ಕೊಟ್ಟಾರಿ, ಮಾಧವ ಬಂಗೇರ, ಪ್ರೇಮ್ ದಾಸ್ ಕುತ್ತಾರ್, ಸುಧಾಕರ್ ಅಮೀನ್ ಈ ಸಂದರ್ಭ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *