Header Ads
Header Ads
Header Ads
Breaking News

ಉಳ್ಳಾಲದ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನ ಸ್ವರ್ಣ ಸಂಗ್ರಹ ಹಾಗೂ ಸಭಾ ಕಾರ್ಯಕ್ರಮ

ಉಳ್ಳಾಲ ಮೊಗವೀರ ಸಂಘದ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ವ್ಯಾಘ್ರ ಚಾಮುಂಡೇಶ್ವರಿ ಹಾಗೂ ಬಂಟ ದೈವಗಳ ಸ್ವರ್ಣ ಬಿಂಬ, ಗುಳಿಗ ದೈವದ ಸ್ವರ್ಣಾಯುಧ ಸ್ವರ್ಣ ಸಂಗ್ರಹ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.

ಉಳ್ಳಾಲ ಮೊಗವೀರ ಪಟ್ಣದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿವರ್ಯರು ಸ್ವರ್ಣ ಸಂಗ್ರಹ ಉದ್ಘಾಟನೆಯನ್ನು ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಶೀವರ್ಚನ ನೀಡಿದರು.

ಅನಂತರ ಆನಂದ ಸಿ ಕುಂದರ್ ಅವರು, ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಉಳ್ಳಾಲ ಮೊಗವೀರ ಸಂಘದಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಮುಂದೆಯೂ ಇಂತಹದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಹೇಳಿದರು.

ಸಮಾರಂಭದಲ್ಲಿ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಭಾಷ್ ಪೂಜಾರಿ, ಹರೀಶ್ಚಂದ್ರ ಪೂಜಾರಿ, ದಯಾನಂದ ಚಂದನ್ ಗುರಿಕಾರರು, ಭರತ್ ಕುಮಾರ್, ಆನಂದ ಸುವರ್ಣ ಮಲ್ಪೆ, ವಿಶ್ವನಾಥ ಗಟ್ಟಿ ವಗ್ಗ, ಸತೀಶ್ ಕರ್ಕೆರಾ, ಸುಂದರ್ ಉಳ್ಳಾಲ್, ಮೋಹನ್ ಬೆಂಗ್ರೆ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ಶರತ್

Related posts

Leave a Reply