Header Ads
Header Ads
Breaking News

ಉಳ್ಳಾಲ:”ಮಕ್ಕಳು ಸಮಾನತೆಯ ಮೂಲ ಪ್ರತೀಕವಾಗಬೇಕು”. ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಬೀಡಗಿ ಹೇಳಿಕೆ

ಮಕ್ಕಳು ಸಮಾನತೆಯ ಮೂಲ ಪ್ರತೀಕವಾಗಬೇಕು. ಪ್ರಭಾವದ ಬದಲು ಸ್ವಭಾವ ಬೆಳೆಸಿಕೊಳ್ಳವ ಮನೋಭಾವ ಬೆಳೆಯಬೇಕಿದೆ ಎಂದು ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಬೀಡಗಿ ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ಭಾಗದ ವಕೀಲರ ಸಂಘಗಳು ಮೊಂಟೆಪದವು ಸರಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್‍ಯದರ್ಶಿ ಮಲ್ಲನಗೌಡ ಪಾಟೀಲ್ ಮಾತನಾಡಿ, ಸಮಾಜದ ಪ್ರತಿಯೊಬ್ಬರಿಗೆ ನ್ಯಾಯ ಒದಗಿಸಿಕೊಡುವುದು ಸರಕಾರದ ಉದ್ದೇಶ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸರಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೂ ಕಾನೂನು ಮತ್ತು ಸೌಲಭ್ಯಗಳ ದುರುಪಯೋಗ ಆಗುತ್ತಿದೆ. ಇದನ್ನು ಗಮನಿಸಿದಾಗ ಜನರಲ್ಲಿ ಕಾನೂನಿನ ತಿಳುವಳಿಕೆ, ಅರಿವು ಇಲ್ಲದಿರುವುದು ಗೊತ್ತಾಗುತ್ತದೆ ಎಂದರು.ಈ ಸಂದರ್ಭ ಜೆಎಂಎಫ್ ಸಿ ಬಂಟ್ವಾಳ ಇಲ್ಲಿನ ಹಿರಿಯ ನ್ಯಾಯಾಧೀಶರಾದ ಮಹಮ್ಮದ್ ಇಮ್ತಿಯಾಝ್ , ಬಂಟ್ವಾಳ ಜೆಎಂಎಫ್‌ಸಿ ನ್ಯಾಯಾಲಯದ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಬಿ.ಯಸ್, ವಕೀಲರ ಸಂಘ ಬಂಟ್ವಾಳದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಎಸ್ ಡಿಎಂಸಿ ಅಧ್ಯಕ್ಷ ನರಿಂಗಾನ ಮುರಳೀಧರ ಶೆಟ್ಟಿ ಮೋರ್ಲ, ಜಿ.ಪಂ ಸದಸ್ಯೆ ಮಮತಾ ಡಿ.ಯಸ್ ಗಟ್ಟಿ, ಪಂ.ಸದಸ್ಯ ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.

Related posts

Leave a Reply