Header Ads
Header Ads
Breaking News

ಉಳ್ಳಾಲ: “ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವಿಳಂಬವಾಗಲು ಇಲ್ಲಿನ ಶಾಸಕರೇ ನೇರ ಕಾರಣ”ವಾಗಿದ್ದಾರೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಆರೋಪಿಸಿದ್ದಾರೆ.

 

ತೊಕ್ಕೊಟ್ಟುವಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರು ವರ್ಷದ ಹಿಂದೆ ತನ್ನ ಕೆಲವು ಕಾರ್ಯಕರ್ತರ ಗುಂಪು ಕೂಡಿಸಿ ಹೆದ್ದಾರಿ ಕೆಲಸವನ್ನು ಶಾಸಕರೇ ನಿಲ್ಲಿಸಿದ್ದರು. ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಮಾಡಿ ಕೊಡುವುದು ರಾಜ್ಯ ಸರಕಾರದ ಕೆಲಸ. ಆದರೆ ಸ್ಥಳೀಯ ಶಾಸಕರು ಅದರಲ್ಲಿ ವಿಳಂಬ ನೀತಿ ಅನುಸರಿಸಿದ್ದಾರೆ. ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರ ಸಂಸ್ಥೆ ನವಯುಗ್ ಬ್ಯಾಂಕ್ ಖಾತೆಗಳನ್ನು ಅಂದಿನ ಕಾಂಗ್ರೆಸ್ ಸರಕಾರ ಬ್ಲಾಕ್ ಮಾಡಿರುವುದರಿಂದ ಸಂಸ್ಥೆ ಹಣಕಾಸಿನ ಮುಗ್ಗಟ್ಟು ಅನುಭವಿಸುತ್ತಿದೆ. ಅವರು ಬಿಲ್ ಪಾವತಿಸದೆ ಕಾಮಗಾರಿ ಸ್ಥಗಿತವಾಗಿತ್ತು. ಇದೀಗ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದ್ದರೂ, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರ ವಿರುದ್ಧ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ದಿನ ದೆಹಲಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಸಚಿವ ನಿತಿನ್ ಗಡ್ಕರಿಯವರ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದರು.ಸುದ್ಧಿಗೋಷ್ಠಿಯಲ್ಲಿ ಕ್ಷೇತ್ರ ಪ್ರಧಾನ ಕಾರ್‍ಯದರ್ಶಿ ಮೋಹನರಾಜ್ ಕೆ.ಆರ್, ಮುಖಂಡರುಗಳಾದ ಮನೋಜ್ ಆಚಾರ್ಯ, ಹರಿಯಪ್ಪ ಸಾಲ್ಯಾನ್, ರಾಮಕೃಷ್ಣ, ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.

Related posts

Leave a Reply