Header Ads
Header Ads
Breaking News

ಉಳ್ಳಾಲ ದರ್ಗಾಕ್ಕಾಗಿ ಹಣ ಸಂಗ್ರಹಕ್ಕೆ ಯಾರನ್ನೂ ನೇಮಿಸಿಲ್ಲ: ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಹೇಳಿಕೆ

ಐತಿಹಾಸಿಕ ಹಾಗೂ ಕಾರಣಿಕ ಶ್ರದ್ಧಾ ಭಕ್ತಿಯ ಧಾರ್ಮಿಕ ಕೇಂದ್ರ ವಾಗಿರುವ ಉಳ್ಳಾಲ ಸಯ್ಯಿದ್ ಮದನಿ ದರ್ಗಾದ ಹೆಸರು ಹೇಳಿಕೊಂಡು ಕೆಲವು ಮಂದಿ ಹಣ ಸಂಗ್ರಹಿಸುತ್ತಿರುವ ಕುರಿತಾಗಿ ಕೇಳಿ ಬಂದಿದ್ದು ಉಳ್ಳಾಲ ದರ್ಗಾಕ್ಕೆ ಸಂದಬೇಕಾದ ಹಣ ನೇರವಾಗಿ ದರ್ಗಾಕ್ಕೇ ಸಲ್ಲಬೇಕು. ಹೊರತು ದರ್ಗಾ ಆಡಳಿತ ಹಣ ಸಂಗ್ರಹಕ್ಕೆ ಯಾರಿಗೂ ಅವಕಾಶ ಕೊಟ್ಟಿಲ್ಲ. ಅಂತಹ ಕೃತ್ಯಕ್ಕೆ ಮುಂದಾದರೆ ಅದನ್ನು ಅಪರಾಧವಾಗಿ ಪರಿಗಣಿಸಲಾಗುವುದು ಎಂದು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.

ಉಳ್ಳಾಲ ಸಯ್ಯಿದ್ ಮದನಿ ದರ್ಗಾ ದಲ್ಲಿ ಮಂಗಳವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲ ದರ್ಗಾ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ. ಭಕ್ತರ ಸಂಖ್ಯೆಯಲ್ಲಿ ಹಾಗೂ ಹರಿಕೆ ಪಾವತಿಯಲ್ಲಿ ಕೇರಳಿಗರ ಕೊಡುಗೆ ದೊಡ್ಡದು. ಆದರೆ ಇತ್ತೀಚೆಗೆ ದರ್ಗಾ ಆಡಳಿತಕ್ಕೆ ಸಿಕ್ಕಿದ ಮಾಹಿತಿ ಪ್ರಕಾರ ಸಂಘಟನೆಯೊಂದಕ್ಕೆ ಸೇರಿದ ಕೆಲವು ಯುವಕರ ತಂಡ ಕೊಲ್ಲಂ, ಹಾಸನ, ಕಾಸರಗೋಡು ಪ್ರದೇಶದಲ್ಲಿ ಉಳ್ಳಾಲ ದರ್ಗಾ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ಉಳ್ಳಾಲ ದರ್ಗಾದಲ್ಲಿ ಆರ್ಥಿಕ ಅಡಚಣೆ ಇದೆ, ಆಡಳಿತಕ್ಕೆ ನೇತಾರ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡುತ್ತಾ ಬಂದಿದೆ.

ಅವರಿಗೆ ಒಂದು ದಿನ ಅಲ್ಲಾಹು ಸದ್ಬುದ್ಧಿ ಕರಯಣಿಸಿಯಾನು ಎಂಬ ನಂಬಿಕೆಯೊಂದಿಗೆ ಅದೆಲ್ಲವನ್ನು ಸಹಿಸುತ್ತಾ ಬಂದಿದ್ದೇವೆ. ಹಣ ಸಂಗ್ರಹಕ್ಕೆ ವ್ಯಕ್ತಿಗತವಾಗಲೀ ಸಂಘಟನೆಗಾಗಲೀ ದರ್ಗಾ ಆಡಳಿತ ಯಾರನ್ನೂ ನೇಮಿಸಿಲ್ಲ, ಅಂತಹ ಅವಕಾಶ ಮಾಡಿ ಕೊಡುವುದೂ ಇಲ್ಲ. ದರ್ಗಾದ ಕೇರಳದ ಭಕ್ತರಿಗೆ ಆ ಬಗ್ಗೆ ಮಾಹಿತಿ ಇರದಿರುವುದು ಆಎಳಿತದ ಗಮನಕ್ಕೆ ಬಂದಿದ್ದು ಅಂತಹ ಕೃತ್ಯದಲ್ಲಿ ತೊಡಗಿಸಿಕೊಂಡವರನ್ನು ದರ್ಗಾದ ಭಕ್ತರು ಖಂಡಿಸಬೇಕು ಎಂದರು.ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹಾ ಮಹಮದ್ , ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಬಾವಾ ಮಹಮ್ಮದ್, ಸದಸ್ಯರುಗಳಾದ ವಿ.ಸಿ. ಕಾಸಿಂ, ಫಾರೂಕ್ ಉಳ್ಳಾಲ್, ಅಮೀರ್ ಹಾಜಿ, ಆಸಿಫ್ ಅಬ್ದುಲ್ಲಾ, ಅಲಿ ಮೋನು, ಕೆ. ಎನ್. ಮಹಮ್ಮದ್, ಹಸೈನಾರ್, ಹಸನ್ ಕೈಕೊ ಹಾಗೂ ಲತೀಫ್ ಮೋನು ಮೇಲಂಗಡಿ ಉಪಸ್ಥಿತರಿದ್ದರು.

Related posts

Leave a Reply