Header Ads
Breaking News

ಉಳ್ಳಾಲ ದರ್ಗಾದಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆ ನಡೆಸಲಿ : ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿಕೆ

ಉಳ್ಳಾಲ ದರ್ಗಾದಲ್ಲಿ ಕೋಟ್ಯಾಂತರ ರೂಪಾಯಿಯ ಅವ್ಯವಹಾರ ನಡೆದಿದೆ ಎಂದೆಲ್ಲಾ ಸುಳ್ಳಾರೋಪ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುವ ಬದಲು ಕಾನೂನು ರೀತಿಯಲ್ಲಿ ತನಿಖೆ ನಡೆಸಿ ಆರೋಪ ಸಾಬೀತುಪಡಿಸಲಿ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.

ದರ್ಗಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ದರ್ಗಾಕ್ಕೆ ಸೆಸ್ನಿಂದ ವಿನಾಯಿತಿ ನೀಡಿರುವ ಬಗ್ಗೆ ದಾಖಲೆಯೂ ಇದೆ. 1.70 ಕೋಟಿ ವಕ್ಫ್ಗೆ ಬಾಕಿಯಿಡಲಾಗಿದೆ ಎಂದು ವಕ್ಫ್ ನೋಟಿಸ್ ನೀಡಿದ್ದು, ಆ ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ಹೀಗಿರುವಾಗ ವಿರೋಧಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡಿ ರಾಜ್ಯ ವಕ್ಫ್ನಿಂದ ಆಡಳಿತಾರಿ ನೇಮಕವಾಗುವಂತೆ ಮಾಡಿದ್ದು, ಈ ಸಂದರ್ಭ ವಕ್ಫ್ಗೆ ಸಂಬಂಧಪಟ್ಟವರು ಸ್ಥಳೀಯ ಶಾಸಕರಲ್ಲೂ ಚರ್ಚಿಸಿಲ್ಲ. ಇದರ ಹಿಂದೆ ದೊಡ್ಡ ಕುಳಗಳ ಒತ್ತಡ ಇರುವುದು ಕಂಡು ಬರುತ್ತದೆ. ನೂತನ ಸಮಿತಿ ಆಡಳಿತಕ್ಕೆ ಬಂದು ಮೂರುವರೆ ವರ್ಷಗಳಾಗಿದ್ದು, ಎರಡು ವರ್ಷ ವಕ್ಫ್ನಿಂದ ಆಡಿಟ್ ಕೂಡ ಆಗಿದ್ದು ಯಾವುದೇ ಲೋಪ ಕಂಡು ಬಂದಿಲ್ಲ. ದರ್ಗಾ ಆಡಳಿತ ಸಮಿತಿಯಲ್ಲಿ ಪ್ರಸ್ತುತ 49 ಸದಸ್ಯರ ಪೈಕಿ 44 ಮಂದಿ ಲಿಖಿತವಾಗಿ ತಮಗೆ ಬೆಂಬಲ ನೀಡಿದ್ದಾರೆ. ಹಿಂದೆ ವಿರೋಧಿಗಳಾಗಿದ್ದ ನಾಲ್ಕೈದು ಸದಸ್ಯರೂ ತಮಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದರ್ಗಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *