Header Ads
Header Ads
Breaking News

ಉಳ್ಳಾಲ: ದಿ.ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಸ್ಮರಣಾರ್ಥ ಕುಸ್ತಿ ಪಂದ್ಯಾಟ

ಉಳ್ಳಾಲ ಮೊಗವೀರ ಪಟ್ಣದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘ ಮತ್ತು ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 71ನೇ ಉಳ್ಳಾಲ ದಸರಾ ಪ್ರಯುಕ್ತ ದಿ.ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಸ್ಮರಣಾರ್ಥ 18ನೇ ಕುಸ್ತಿ ಪಂದ್ಯಾಟ ಉಳ್ಳಾಲ ಶ್ರೀ ಶಾರದಾ ನಿಕೇತನದಲ್ಲಿ ನಡೆಯಿತು.ಸೋಮೇಶ್ವರ ಸೋಮನಾಥ ದೇವಸ್ಥಾನ ಸಮಿತಿಯ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ನಂತರ ಮಾತನಾಡಿ ಅವರು ದಿವಂಗತ ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ರವರು ಕುಸ್ತಿಯಲ್ಲಿ ವಿಶೇಷ ಸಾಧನೆ ಮಾಡುವ ಮೂಲಕ ಮೊಗವೀರ ಸಮುದಾಯ ಮತ್ತು ಉಳ್ಳಾಲ ಊರನ್ನು ದೇಶಕ್ಕೆ ಪರಿಚಯಿಸಿದೆ.

ಕುಸ್ತಿ ಪಟುಗಳಿಗೆ ದಿವಂಗತ ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಮಾದರಿಯಾಗಿದ್ದಾರೆ ಎಂದು ಹೇಳಿದರು.ಉಳ್ಳಾಲ ಅಬ್ಬಕ್ಕ ಉತ್ಸವ ಸಮಿತಿಯ ಗೌರವಾಧ್ಯಕ್ಷ ಸದಾನಂದ ಬಂಗೇರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಸ್ತಿ ಪಂದ್ಯಾಟಕ್ಕೆ ಪರಂಪರೆ ಇದೆ. ನಿರಂತರ ಪ್ರಯತ್ನದ ನಂತರ ಪಂದ್ಯಾವಳಿಯಲ್ಲಿ ಭಾಗವಹಿಸಿದಾಗ ಉತ್ತಮ ಫಲಿತಾಂಶ ಸಿಗುತ್ತದೆ. ಹಳೇ ಕುಸ್ತಿ ಪಂದ್ಯಕೂ ಈಗಿನ ಕುಸ್ತಿ ಪಂದ್ಯಕೆ ತುಂಬು ವ್ಯತ್ಯಾಸ ಇದೆ ಎಂದು ಹೇಳಿದರು.ಈ ಸಂದರ್ಭ ರಾಷ್ಟ್ರೀಯ ಕಬ್ಬಡಿ ಆಟಗಾರ ಗೋಪಿನಾಥ್ ಕಾಪಿಕಾಡ್, ದ.ಕ ಜಿಲ್ಲಾ ಅಮೆಚೂರ್ ಕುಸ್ತಿ ಸಂಘದ ಅಧ್ಯಕ್ಷ ಪ್ರಕಾಶ್ ಕಕೇರ, ಸೋಮೇಶ್ವರ ಸೋಮನಾಥ ದೇವಸ್ಥಾನದ ಮೊಕ್ತೇಸರರು ರಾಘವ ಆರ್ ಉಚ್ಚಿಲ್, ತುಳುನಾಡ ಕೇಸರಿ ಪ್ರಶಸ್ತಿ ವಿಜೇತ ಅರುಣ್ ಪುತ್ರನ್ ಬೆಂಗ್ರೆ, ಉದ್ಯಮಿ ಝುಲ್ಫಿಕರ್ ಸುರತ್ಕಲ್, ಎನ್.ಎಂ.ಪಿಟಿಯಾ ರವಿರಾಜ್ ಪುತ್ರನ್ ಉಳ್ಳಾಲ್, ವಿಜಯ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಕೃಷ್ಣ ರಾಜ ಎಂ. ಪುತ್ರ ನ್ ಉಪಸ್ಥಿತರಿದ್ದರು.

 

Related posts

Leave a Reply