Header Ads
Header Ads
Breaking News

ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಕಳಪೆ ಕಾಮಗಾರಿ

ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿನ ಕಳಪೆ ಕಾಮಗಾರಿಯಿಂದ ರಸ್ತೆಯಿಡೀ ಮಳೆ ನೀರು ಹರಿದು, ಅಂಗಡಿ ಮಾಲೀಕರು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ.ತೊಕ್ಕೊಟ್ಟು ಮಳೆಯಿಂದ ಹಾನಿಗೀಡಾದ ಅಂಗಡಿ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ಉಳ್ಳಾಲ ವ್ಯಾಪ್ತಿಯಲ್ಲಿ ಎಲ್ಲಿಯೂ ಹೂಳೆತ್ತುವ ಕಾರ್ಯ ನಡೆದಿಲ್ಲ. ಮಳೆ ಬಂದ ನಂತರ ಆದ ಹಾನಿ ಬಳಿಕ ಎಚ್ಚೆತ್ತ ನಗರಸಭೆ ಆಡಳಿತ ಇದೀಗ ಹೆದ್ದಾರಿ ಪ್ರಾಧಿಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ.

ಜನಸಾಮಾನ್ಯರಿಗೆ ಆಗುವ ತೊಂದರೆಯನ್ನು ಮೊದಲಿಗೆ ಸ್ಥಳೀಯಾಡಳಿತ ಸರಿಪಡಿಸಬೇಕಿದೆ . ವಾಣಿಜ್ಯ ಕಟ್ಟಡಗಳಿಗೂ ಸರಿಯಾದ ಚರಂಡಿ ವ್ಯವಸ್ತೆ ಮಾಡದೆ ಅನುಮತಿ ನೀಡುತ್ತಿರುವುದು ವಿಪರ್ಯಾಸ ಎಂದರು.ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಹೆದ್ದಾರಿ ಇಲಾಖೆಯ ಅಧಿಕಾರಗಳನ್ನು ಮತ್ತು ನಗರಸಭೆಯ ಅಧಿಕಾರಿಗಳನ್ನು, ಮತ್ತು ನಿನ್ನೆ ಸಮಸ್ಯೆಯನ್ನು ನಿಭಾಯಿಸಿದ ಟ್ರಾಫಿಕ್ ಪೋಲೀಸರನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆ ಮರುಕಳಿಸದಂತೆ ಅಗತ್ಯ ತುರ್ತು ಕ್ರಮಗಳನ್ನು ಜರುಗಿಸಲು ಆಗ್ರಹಿಸಿದರು.ಈ ಸಂಧರ್ಭದಲ್ಲಿ ನಗರಸಭೆಯ ಆಯಕ್ತರಾದ ದಿನಕರ್ ಶೆಟ್ಟಿ, ಇಂಜಿನಿಯರ್ ತುಳಸಿ, ಆರೋಗ್ಯಧಿಕಾರಿ ರಾಜೇಶ್, ಹೆದ್ದಾರಿ ಇಲಾಖೆಯ ಇಂಜಿನಿಯರ್ ಯೋಗ್ಯೇಂದ್ರ ರೆಡ್ಡಿ, ಟ್ರಾಫಿಕ್ ಜಯರಾಮ್ ಗಟ್ಟಿ ಮತ್ತು ಸಿಬ್ಬಂದಿಗಳು, ಬಿ.ಜೆ.ಪಿ. ಪ್ರಮುಖರಾದ ಜೀವನ್ ಕುಮಾರ್ ತೊಕ್ಕೊಟು, ಮಾಜಿ ಕೌನ್ಸಿಲರ್ ಗಳಾದ ಲಲಿತಾ ಸುಂದರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply