Header Ads
Header Ads
Breaking News

ಉಳ್ಳಾಲ ನಗರಸಭೆ ಸೌಂದರ್ಯಗೊಳಿಸಲು ವಿಶೇಷ ಒತ್ತು ಬಜೆಟ್ ಮಂಡನೆಯಲ್ಲಿ ಪೌರಾಯುಕ್ತೆ ವಾಣಿ ವಿ.ಆಳ್ವ ಹೇಳಿಕೆ

ಉಳ್ಳಾಲ ನಗರಸಭಾ ವ್ಯಾಪ್ತಿ ಸೌಂದರ್ಯಗೊಳಿಸಲು ವಿಶೇಷ ಗಮನ ನೀಡಲಾಗಿದೆ. ಆದಾಯ ಹೆಚಳ ನಿಟ್ಟಿನಲ್ಲಿ 15 ಕಡೆ ಹೋರ್ಡಿಂಗ್ಸ್ ಅಳವಡಿಕೆಗೆ ಯೋಚಿಸಲಾಗಿದ್ದು ಇದರಿಂದ 21.60 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಸೌಂದರ್ಯದ ನಿಟ್ಟಿನಲ್ಲಿ ಮೂರು ಕಡೆ ಹೈಮಾಸ್ಟ್ ದೀಪ ಅಳವಡಿಕೆ, ದಾರಿದೀಪ ವಿಸ್ತರಣೆ, ಎಲ್‌ಇಡಿ, ಸೋಡಿಯಂ ಟ್ಯೂಬ್‌ಲೈಟ್ ಖರೀದಿಗಾಗಿ 75 ಲಕ್ಷ ಮೀಸಲಿರಿಸಲಾಗಿದೆ ಎಂದು ಪೌರಾಯುಕ್ತೆ ವಾಣಿ ವಿ.ಆಳ್ವ ಬಜೆಟ್ ಮಂಡಿಸಿ ವಿವರಿಸಿದ್ದಾರೆ.

ಸ್ವಚ್ಛ ಹಾಗೂ ಕುಡಿಯುವ ನೀರು ಸಮಸ್ಯೆ ಮುಕ್ತ ಉಳ್ಳಾಲ ನಿರ್ಮಾಣಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗಿದ್ದು, ಸ್ವಚ್ಛತೆ ಕಾಪಾಡುವವರಿಗೆ ಬಹುಮಾನವನ್ನೂ ಘೋಷಿಸಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂದಡಿಯಿರಿಸಲಾಗಿದ್ದು ಬಹುಮಾನ ನೀಡುವ ವಿಶಿಷ್ಟ ಯೋಜನೆ ರೂಪಿಸಲಾಗಿದೆ. 2018ರಲ್ಲಿ ಗಾಂಧಿ ಜಯಂತಿಯಂದು ಪ್ರತೀ ವಾರ್ಡುಗಳನ್ನು ಪರಿಶಿಲೀಸಿ ಸ್ವಚ್ಛ ವಾರ್ಡ್‌ಗೆ ಪ್ರಥಮ ಲಕ್ಷ, ದ್ವಿತೀಯ 75 ಹಾಗೂ ತೃತೀಯ 50 ಸಾವಿರ ಬಹುಮಾನ ಘೋಷಿಸಲಾಗಿದೆ. ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಒಂದು ಸಂಘ-ಸಂಸ್ಥೆ, ಶಾಲೆ, ಕಾಲೇಜು ಮತ್ತು ಒಬ್ಬ ನಾಗರಿಕನನ್ನು ಗುರುತಿಸಿ ಪ್ರೋತ್ಸಾಹಧನದೊಂದಿಗೆ ಸನ್ಮಾನಿಸುವ ಯೋಜನೆ ರೂಪಿಸಲಾಗಿದ್ದು, ಒಟ್ಟು ಕಾರ್ಯಕ್ರಮಕ್ಕೆ ಎರಡೂವರೆ ಲಕ್ಷ ಹಣ ಮೀಸಲಿಡಲಾಗಿದೆ.ಸ್ವಚ್ಛತೆ ಕಾರ್ಯದಲ್ಲಿ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳು ಏಳು ವಾರ್ಡ್‌ಗಳಲ್ಲಿ ಕಾರ್ಯಾಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ 27 ವಾರ್ಡ್‌ಗಳಲ್ಲೂ ಕಾರ್ಯಾಚರಿಸಲಿದ್ದಾರೆ. ಪ್ರತೀ ಮನೆಗಳಲ್ಲೂ ಹಸಿ, ಒಣಕಸ ವಿಂಗಡಿಸುವ ನಿಟ್ಟಿನಲ್ಲಿ ತಲಾ ಎರಡು ಬಕೆಟ್‌ನಂತೆ 10.804 ಮನೆಗಳಿಗೆ ವಿತರಿಸುವ ಗುರಿ ಹೊಂದಲಾಗಿದ್ದು, ಪ್ರತೀ ಬಕೆಟ್‌ಗೆ 150 ರೂಪಾಯಿಯಂತೆ 3,24,100ರೂಪಾಯಿ ಮೀಸಲಿರಿಸಲಾಗಿದೆ. ಇದಕ್ಕಾಗಿ ಪ್ರತೀ ವಾರ್ಡ್‌ನಲ್ಲೂ ೧೫ ಮಂದಿಯ ಸಮಿತಿ ರಚಿಸುವಂತೆ ವಾಣಿ ಆಳ್ವ ಸೂಚಿಸಿದರು.ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು ಉಪಾಧ್ಯಕ್ಷೆ ಚಿತ್ರಕಲಾ ಹಾಗೂ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು ಉಪಸ್ಥಿತರಿದ್ದರು.
ವರದಿ: ಆರೀಫ್ ಉಳ್ಳಾಲ

Related posts

Leave a Reply