Header Ads
Breaking News

ಉಳ್ಳಾಲ ನಗರ ಸಭೆಯಿಂದ ದಿಢೀರ್ ರೈಡ್ : ಅತ್ಯಧಿಕ ಬಾಡಿಗೆ ಬಾಕಿಯಿದ್ದ ಅಂಗಡಿಗಳಿಗೆ ಬೀಗ

ಹಲವು ವರ್ಷಗಳಿಂದ ಲಕ್ಷಾಂತರ ರೂಪಾಯಿ ಬಾಡಿಗೆ ಕಟ್ಟದೆ ವ್ಯವಹಾರ ನಡೆಸುತ್ತಿದ್ದ ಅಂಗಡಿಗಳಿಗೆ ಗುರುವಾರ ನಗರಸಭೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಅತ್ಯಧಿಕ ಬಾಡಿಗೆ ಬಾಕಿಯಿದ್ದ ಅಂಗಡಿಗಳಿಗೆ ಬೀಗ ಜಡಿದಿದೆ. 

ಉಳ್ಳಾಲ ನಗರಸಭೆಯ ತೊಕ್ಕೊಟ್ಟಿನಲ್ಲಿರುವ ಕಟ್ಟಡದಲ್ಲಿ ಹೋಟೆಲ್, ಬಟ್ಟೆಯಂಗಡಿ, ಬೇಕರಿ, ಜೆರಾಕ್ಸ್, ಫಾಸ್ಟ್ ಫುಡ್ ಸಹಿತ 50 ಮಳಿಗೆಗಳಿದ್ದು, ಹಲವು ಮಳಿಗೆಗಳಿಂದ ಬಾಡಿಗೆ ಪಾವತಿಯಾಗದೆ ಹಲವು ತಿಂಗಳುಗಳೇ ಕಳೆದಿವೆ. ಐದು ಲಕ್ಷ ಬಾಡಿಗೆ ಬಾಕಿಯಿರುವ ಅಂಗಡಿಗಳೂ ಇವೆ. ಈ ಹಿನ್ನೆಲೆಯಲ್ಲಿ ಗುರುವಾರ ಪೌರಾಯುಕ್ತ ರಾಯಪ್ಪ ನೇತೃತ್ವದ ತಂಡ ದಾಳಿ ನಡೆಸಿ ಅಧಕ ಬಾಡಿಗೆ ಬಾಕಿಯಿದ್ದ ಅಂಗಡಿಗಳಿಗೆ ಬೀಗ ಜಡಿದರೆ, ಕೆಲವು ಅಂಗಡಿದಾರರಿಗೆ ಎರಡು ದಿನಗಳ ಸಮಯ ನಿಗದಿಪಡಿಸಿದ್ದಾರೆ. ಇದೇ ವೇಳೆ ನಗರಸಭೆಯ ಅಡಿಭಾಗದಲ್ಲಿರುವ ಮೂರು ಅಂಗಡಿಗಳಿಗೂ ಬೀಗ ಜಡಿದಿದ್ದಾರೆ.

ದಾಳಿ ಸಂದರ್ಭ ಕೌನ್ಸಿಲರ್ ಭಾರತಿ ಅವರ ಅಂಗಡಿಯಿಂದಲೂ 30 ಸಾವಿರ ರೂಪಾಯಿ ಬಾಡಿಗೆ ಬಾಕಿಯಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೂ ಬಾಡಿಗೆ ಪಾವತಿಸುವಂತೆ ರಾಯಪ್ಪ ತಾಕೀತು ಮಾಡಿ ಎರಡು ದಿನಗಳ ಸಮಯಾವಕಾಶ ನೀಡಿದ್ದು, ತಪ್ಪಿದಲ್ಲಿ ಬೀಗ ಜಡಿಯುವುದಾಗಿ ಎಚ್ಚರಿಸಿದ್ದಾರೆ.

ಇಲ್ಲಿರುವ ಬಹುತೇಕ ಮಳಿಗೆಗಳು ಯಾರದ್ದೋ ಹೆಸರಲ್ಲಿದ್ದು, ಮೂರ್ನಾಲ್ಕು ಮಂದಿ ಒಳಬಾಡಿಗೆಯಲ್ಲಿ ಪಡೆದಿದ್ದಾರೆ. ಪ್ರಸ್ತುತ ಕಾರ್ಯ ನಿರ್ವಹಿಸುವವರು ತಾವು ಯಾರಲ್ಲಿ ಕೋಣೆ ಪಡೆದಿದ್ದಾರೋ ಅವರಿಗೆ ಬಾಡಿಗೆ ಪಾವತಿಸಿದರೂ, ನಗರಸಭೆ ತಲುಪಿಲ್ಲ. ಈ ಬಗ್ಗೆ ಪ್ರಸ್ತುತ ಬಾಡಿಗೆದಾರರು ಅಧಿಕಾರಿಗಳಿಗೆ ತಿಳಿಸಿದ್ದಾರೆ.ದೊಡ್ಡ ಮಟ್ಟದ ವ್ಯಾಪಾರಿಗಳೂ ದೊಡ್ಡ ಮೊತ್ತದ ಬಾಡಿಗೆ ಬಾಕಿಯಿಟ್ಟಿರುವ ಬಗ್ಗೆ ತೀವ್ರ ಅಸಮಾಧಾನಗೊಂಡ ರಾಯಪ್ಪ, ನೀವೇ ಹೀಗೆ ಮಾಡಿದರೆ, ಬಡವರು ಏನು ಮಾಡಬೇಕು? ನಿಮ್ಮಂತಹವರು ತಿಂಗಳ ಬಾಡಿಗೆ ಮುಂಗಡವಾಗಿಯೇ ಪಾವತಿಸಬೇಕಿತ್ತು. ಬಾಡಿಗೆ ಬಾಕಿಯಿಟ್ಟು ನಗರಸಭೆ ಅಭಿವೃದ್ಧಿಗೆ ಅಡ್ಡಿಯಾಗಬೇಡಿ ಎಂದು ಮನವಿ ಮಾಡಿದರು.

Related posts

Leave a Reply

Your email address will not be published. Required fields are marked *