Breaking News

ಉಳ್ಳಾಲ ನಿವಾಸಿಗಳಿಗೆ ಗಂಜಿ ಕೇಂದ್ರ ಸ್ಥಾಪನೆ, ಉಳ್ಳಾಲ ತೀರದಲ್ಲಿ ಕಡಲ್ಕೊರೆತದ ಅಬ್ಬರ

ಕಡಲ್ಕೊರೆತದಿಂದ ಅಪಾಯದಲ್ಲಿರುವ ಉಳ್ಳಾಲ ನಿವಾಸಿಗಳಿಗೆ ತಾತ್ಕಾಲಿಕವಾಗಿ ಗಂಜಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ಭಾಗದಲ್ಲಿನ ಅಪಾಯದಲ್ಲಿರುವ ಸುಮಾರು ೪೦ ಮನೆಗಳನ್ನು ಗುರುತಿಸಲಾಗಿದೆ.
ಉಳ್ಳಾಲದಲ್ಲಿ ಗಂಜಿ ಕೇಂದ್ರ ಸ್ಥಾಪನೆಗೆ ಸಹಾಯಕ ಕಮಿಷನರ್ ಸ್ಥಳಿಯಾಡಳಿತ ಸಂಸ್ಥೆಗೆ ಆದೇಶ ನೀಡಿದ್ದು, ಸ್ಥಳೀಯ ಅಂಗನವಾಡಿ ಕೇಂದ್ರ, ಖಾಲಿ ಇರುವ ಫ್ಲಾಟ್‌ಗಳು, ಮತ್ತು ಹಾಸ್ಟೆಲ್‌ಗಳಿಗೆ ಅಪಾಯದಲ್ಲಿರುವ ಕುಟುಂಬಗಳನ್ನು ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆ ಎಂದು ಪೌರಾಯುಕ್ತೆ ವಾಣಿ ವಿ. ಆಳ್ವ ತಿಳಿಸಿದ್ದಾರೆ. ಸಮುದ್ರದ ಅಲೆಗಳು ಮನೆಗಳಿಗಪ್ಪಳಿಸುತ್ತಿದ್ದು, ಮೊಗವೀರಪಟ್ಣ, ಕಿಲಿರಿಯಾ ನಗರ ಮುಕ್ಕಚ್ಚೇರಿ, ಸುಭಾಷ್‌ನಗರ, ಕೈಕೋದಲ್ಲಿ ಮನೆಗಳ ಒಳಗೆ ಸಮುದ್ರದ ನೀರು ತುಂಬಿ ವಾಸಿಸಲು ಕಷ್ಟಕರವಾಗಿದೆ. ಈ ಪ್ರದೇಶದಲ್ಲಿ ಆಪಾಯದಲ್ಲಿರುವ ಮನೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಗುರುವಾರ ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

Leave a Reply