Header Ads
Header Ads
Breaking News

ಉಳ್ಳಾಲ ಪೌರ ಸಮಿತಿಯಿಂದ ಯು.ಟಿ.ಖಾದರ್‌ಗೆ ಸನ್ಮಾನ.’ಕರುನಾಡ ಮಾಣಿಕ್ಯ’ ಪ್ರಶಸ್ತಿ ಸ್ವೀಕರಿಸಿದ ಖಾದರ್

ಮುಂದಿನ ಐದು ವರ್ಷಗಳಲ್ಲಿ ಉಳ್ಳಾಲ ಅಭಿವೃದ್ಧಿಯಲ್ಲಿ ಮಹತ್ತರ ಬದಲಾವಣೆ ಕಾಣಲಿದ್ದು, ಜನರು ಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.ಉಳ್ಳಾಲ ಪೌರ ಸಮಿತಿಯಿಂದ ನಗರಸಭಾ ಮೈದಾನದಲ್ಲಿ ನಡೆದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ’ಕರುನಾಡ ಮಾಣಿಕ್ಯ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮುಗೇರಿನಲ್ಲಿ ರೈಲು ಗೇಟ್ ಬಿದ್ದಾಗ ಉಳ್ಳಾಲ ಭಾಗದವರೇ ಕಷ್ಟಪಡುವುದು ಕಾಣಬಹುದು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ, ಕೋಟೆಪುರ ಕೋಡಿ ನೇರ ರಸ್ತೆ ನಿರ್ಮಾಣ, ಒಂಬತ್ತು ಕೆರೆಯಲ್ಲಿ ವಸತಿ ಸಮುಚ್ಚಯ ನಿರ್ಮಾಣ, ಕೈಕೋದಿಂದ ತಲಪಾಡಿವರೆಗೆ ಕಡಲ್ಕೊರೆತ ತಡೆಗೆ ಬರ್ಮ್ ನಿರ್ಮಾಣ, ಕೊಣಾಜೆಯಲ್ಲಿ ಅಗ್ನಿ ಶಾಮಕ ಕಟ್ಟಡ ನಿರ್ಮಾಣ ಸಹಿತ ಹಲವು ಯೋಜನೆಗಳಿಗೆ ಶೀಘ್ರ ಚಾಲನೆ ನೀಡಲಾಗುವುದು. ಸೌಹಾರ್ದ ಉಳ್ಳಾಲಕ್ಕೆ ನೀವು ಸಹಕರಿಸಿ, ನಿಮ್ಮ ಕಾಲಬುಡಕ್ಕೆ ಅಭಿವೃದ್ಧಿ ತಲುಪಿಸುತ್ತೇನೆ ಎಂದರು.ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಎಲ್ಲ ಧರ್ಮೀಯರು ಜೊತೆ ಸೇರಿ ಸನ್ಮಾನ ಮಾಡಬೇಕಾದರೆ ಯು.ಟಿ.ಖಾದರ್ ಪ್ರತಿಯೊಬ್ಬರಲ್ಲಿ ಇಟ್ಟಿರುವ ಪ್ರೀತಿಯೇ ಕಾರಣ. ಖಾದರ್‌ಗೆ ನಿರಾಯಾಸವಾಗಿ ಸಚಿವ ಸ್ಥಾನ ಸಿಗಲು ಜನರೊಂದಿಗಿನ ಒಡನಾಟ ಕಾರಣ. ಇದುವರೆಗಿನ ಯಶಸ್ಸು ಉಳಿಯಬೇಕಾದರೆ ವಸತಿ ಸಚಿವ ಸ್ಥಾನವನ್ನೂ ಉತ್ತಮವಾಗಿ ನಿಭಾಯಿಸಿ ಜನರ ವಿಶ್ವಾಸ ಉಳಿಸಿ ಎಂದು ಕಿವಿಮಾತು ಹೇಳಿದರು.ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು, ಉಪಾಧ್ಯಕ್ಷೆ ಚಿತ್ರಾಕ್ಷಿ, ಶ್ರೀ ಚೀರುಂಭ ಭಗವತೀ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ನಿತ್ಯಾಧರ್ ಚರ್ಚ್ ನ ಧರ್ಮಗುರು ಫಾ.ಎಲಿಯಾಸ್ ಡಿಸೋಜ, ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ ನ ಸಹಾಯಕ ದರ್ಮಗುರು ಫಾ.ಲೈಝಿಲ್ ಪಿಂಟೋ, ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಕಾಪಿಕಾಡು ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ, ಮೊಗವೀರ ಸಂಘದ ಅಧ್ಯಕ್ಷ ಭರತ್ ಉಳ್ಳಾಲ್, ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಅಧ್ಯಕ್ಷ ಶ್ರೀಕರ್ ಕಿಣಿ, ಸದಾನಂದ ಬಂಗೇರ, ಮತ್ಸೋದ್ಯಮಿ ಅಬ್ದುಲ್ ಖಾದರ್, ರಾಮಚಂದ್ರ ಬಂಗೇರ, ಐತಪ್ಪ ಶೆಟ್ಟಿಗಾರ್, ಸಂಜೀವ ಉಳ್ಳಾಲ್, ಉದ್ಯಮಿ ಬಶೀರ್ ಅಹ್ಮದ್ ಶಾಲಿಮಾರ್ ಮುಖ್ಯ ಅತಿಥಿಗಳಾಗಿದ್ದರು. ಸಮಿತಿ ಸದಸ್ಯರಾದ ಮೊಹಮ್ಮದ್ ಮೂಸಾ, ಯು.ಕೆ.ಯೂಸುಫ್, ರವೀಂದ್ರರಾಜ್ ಉಳ್ಳಾಲ್, ನಾಝಿಂ, ಎ.ಆರ್.ನಝೀರ್ ಕೋಡಿ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply