Header Ads
Header Ads
Breaking News

ಉಳ್ಳಾಲ ಬಳಿ ಕಾರಿಗೆ ಬಡಿದ ಟೆಂಪೋ,  ಇಬ್ಬರಿಗೆ ಗಂಭೀರ ಗಾಯ

ಕಾರು ಮತ್ತು ಟೆಂಪೋ ಟ್ರಾವೆಲರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ೬೬ರ ಉಳ್ಳಾಲದ ಕೆ. ಸಿ. ರೋಡ್ ಜಂಕ್ಷನ್ನಿನಲ್ಲಿ ನಡೆದಿದೆ.
ಕಾರಿನಲ್ಲಿದ್ದ ಕುಂಜತ್ತೂರು ನಿವಾಸಿಗಳಾದ ಮುಸ್ತಾಫ ಮತ್ತು ಸಮದ್ ರಫೀ ಗಾಯಗೊಂಡವರಾಗಿದ್ದಾರೆ. ಮಂಗಳೂರಿನಿಂದ ಕುಂಜತ್ತೂರು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಅದೇ ಮುಖವಾಗಿ ಎದುರಿನಲ್ಲಿದ್ದ ಚಲಿಸುತ್ತಿದ್ದ ಬಸ್ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಚಾಲಕ ಡಿವೈಡರ್ ಏರಿದ್ದು, ಬಳಿಕ ಮಂಗಳೂರು ಕಡೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಎರಡು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.

Related posts

Leave a Reply