Header Ads
Header Ads
Breaking News

’ಉಳ್ಳಾಲ ಬೀಚ್ ಉತ್ಸವ’-2018 ಉಳ್ಳಾಲ ಸಮುದ್ರ ಕಿನಾರೆಯಲ್ಲಿ ಉತ್ಸವ ಫೆ.10 ಮತ್ತು 11ರಂದು ವಿವಿಧ ಕಾರ್ಯಕ್ರಮ

ಉಳ್ಳಾಲ ಸಮುದ್ರ ಕಿನಾರೆಯಲ್ಲಿ ಫೆಬ್ರವರಿ 10 ಮತ್ತು 11ರಂದು ’ಉಳ್ಳಾಲ ಬೀಚ್ ಉತ್ಸವ’-2018 ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮನೋಜ್ ಸಾಲ್ಯಾನ್ ಬ್ರದರ್‍ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಬ್ರದರ್ರ್‍ಸ್ ಯುವಕ ಮಂಡಲದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಸಹಕಾರದಲ್ಲಿ ಫೆಬ್ರವರಿ 4ರಂದು ಸಂಜೆ 4:00ಗಂಟೆಯಿಂದ ಉಳ್ಳಾಲ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ‘ಬ್ರದರ್ಸ್ ಟ್ರೋಫಿ’-2018 ನಡೆಯಲಿದೆ. ರಾತ್ರಿ 11:00ಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಉಳ್ಳಾಲ ಮೊಗವೀರ ಗ್ರಾಮಸಭೆಗೆ 1.5ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಮೊಗವೀರ ಕುಲಗುರು ಪೂಜನೀಯ ಮಾಧವ ಮಂಗಲ ಗುರೂಜಿ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭ ಫೆ. 9ರಂದು ಸಂಜೆ 6:00ಗಂಟೆಗೆ ನಡೆಯಲಿದೆ. ಉಡುಪಿ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ನಾಡೋಜ ಡಾ. ಜಿ. ಶಂಕರ್ ಸಮುದಾಯ ಭವನ ಉದ್ಘಾಟಿಸಲಿದ್ದಾರೆ. ಫೆಬ್ರವರಿ 10ರಂದು ಗಂಟೆ 3.00ರಿಂದ ಉಳ್ಳಾಲ ಮೊಗವೀರಪಟ್ಣ ಕಡಲ ಕಿನಾರೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಫೆ. 11ರಂದು ಬೆಳಗ್ಗೆ ಗಂಟೆ 9:00ರಿಂದ ರಾತ್ರಿ 11:00ರ ತನಕ ಸ್ಥಳೀಯ ಮಹಿಳೆಯರಿಗೆ, ಪುರುಷರಿಗೆ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಬೀಚ್ ಉತ್ಸವ ಪ್ರಯುಕ್ತ ದೋಣಿ ಚಲಾಯಿಸುವುದು, ಈಜು, ಮಡಕೆ ಒಡೆಯುವುದು, ಬಲೆ ಬೀಸುವುದು, ಮಹಿಳೆಯರಿಗೆ ಬೀಚ್ ತ್ರೋಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದೆ. ಕರ್ನಾಟಕದ ಪ್ರಸಿದ್ಧ ನೃತ್ಯ ತಂಡಗಳಿಂದ ಮನಮೋಹಕ ರೋಚಕ ಚಿತ್ತಾಕರ್ಷಕ ನೃತ್ಯ ಹಾಗೂ ಮನೋರಂಜನೆ ಪ್ರದರ್ಶನ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಣಂಬೂರು ಬೀಚ್‌ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಯತೀಶ್ ಬೈಕಂಪಾಡಿ, ಪ್ರಧಾನ ಸಂಚಾಲಕ ವಿಶ್ವನಾಥ ಬಂಗೇರ, ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುರಾಜ್ ಅಮೀನ್, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಕಾರ್ಯಾಧ್ಯಕ್ಷ ರಾಜೇಶ್ ಪುತ್ರನ್, ಕೋಶಾಧಿಕಾರಿ ಸುನಿಲ್ ಪುತ್ರನ್ ಹಾಗೂ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಜಾನಕಿ ಉಪಸ್ಥಿತರಿದ್ದರು.

Related posts

Leave a Reply