Header Ads
Header Ads
Breaking News

ಉಳ್ಳಾಲ: ರಿಕ್ಷಾ ಮತ್ತು ಬಸ್ ನಡುವೆ ಅಪಘಾತ ಚಾಲಕ ಸಹಿತ ಏಳು ಮಂದಿ ವಿದ್ಯಾರ್ಥಿಗಳಿಗೆ ಗಾಯ

ಉಳ್ಳಾಲ: ರಿಕ್ಷಾ ಮತ್ತು ಬಸ್ಸಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಸಹಿತ ರಿಕ್ಷಾ ಚಾಲಕ ಸೇರಿ ೮ ಮಂದಿ ಗಾಯಗೊಂಡಿರುವ ಘಟನೆ ಮುಡಿಪು ಮೂಳೂರು ರಸ್ತೆ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮುಡಿಪು ಭಾರತಿ ಶಾಲಾ ವಿದ್ಯಾರ್ಥಿಗಳಾದ , ಮೂಳೂರು ಹಾಗೂ ಇರಾ ನಿವಾಸಿಗಳಾದ ಹಝರತ್ (9), ಅಫ್ವಾನಾ (7), ತಪ್ಸೀರಾ (19), ಸಫ್ವಾನ್ (15) , ಅಸ್ನಾ , ದಿವ್ಯಾ(9) , ಧನ್ಯಾ (12) ಹಾಗೂ ರಿಕ್ಷಾ ಸಮೀರ್ (24) ಗಾಯಗೊಂಡವರು. ಕಿರಿದಾದ ರಸ್ತೆಯಲ್ಲಿ ಬೈಕೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮೂಳೂರಿನಿಂದ ಮುಡಿಪು ಕಡೆಗೆ ವಿದ್ಯಾರ್ಥಿಗಳನ್ನು ಹೇರಿಕೊಂಡು ಬರುತ್ತಿದ್ದ ರಿಕ್ಷಾ ಮುಡಿಪುವಿನಿಂದ ಬಿ.ಸಿ.ರೋಡು ಕಡೆಗೆ ತೆರಳುತ್ತಿದ್ದ ಬಸ್ಸಿನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

Leave a Reply