Header Ads
Header Ads
Breaking News

ಉಳ್ಳಾಲ ರೈಲ್ವೇ ನಿಲ್ದಾಣದ ಹಳೆಯ ಕಟ್ಟಡ ಕುಸಿತ.

ಉಳ್ಳಾಲ ರೈಲ್ವೇ ನಿಲ್ದಾಣದಲ್ಲಿರುವ 125ವರ್ಷಗಳ ಹಳೇಯದಾದ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದುಬಿದ್ದಿರುವ ಘಟನೆ ನಡೆದಿದೆ.ಕಟ್ಟಡದಲ್ಲಿ ಇದ್ದಂತಹ ಕ್ಯಾಂಟೀನ್ ಅನ್ನು ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಮೂರು ತಿಂಗಳ ಹಿಂದೆಯಷ್ಟೇ ಅಧಿಕಾರಿಗಳ ಸೂಚನೆಯಂತೆ ಸ್ಥಳಾಂತರಿಸಲಾಗಿತ್ತು. ನಿಯಂತ್ರಣ ಕೊಠಡಿ ಸಮೀಪವೇ ಇದ್ದಂತಹ ಕಟ್ಟಡವನ್ನು ಇಲಾಖೆ ಉಪಯೋಗಿಸುತ್ತಿರಲಿಲ್ಲ.ಆದರೂ ರೈಲಿಗಾಗಿ ಕಾಯುವ ಕೆಲ ಪ್ರಯಾಣಿಕರು ಅಲ್ಲೇ ಕುಳಿತುಕೊಳ್ಳುತ್ತಿದ್ದರು. ಸ್ಥಳದಲ್ಲಿರುವ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರು ಕೂಡಾ ಅಲ್ಲಿ ವಿಶ್ರಾಂತಿಸುತ್ತಿದ್ದರು. ಆದರೆ ಕುಸಿತದ ಸಂದರ್ಭ ಒಳಗೆ ಯಾರು ಇರಲಿಲ್ಲ. ಇದರಿಂದ ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಇಂದು ಭೇಟಿ ನೀಡಲಿದ್ದಾರೆ ಎಂದು ಉಳ್ಳಾಲದಲ್ಲಿರುವ ಅಧಿಕೃತರು ತಿಳಿಸಿದ್ದಾರೆ.  ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾದ ಉಳ್ಳಾಲ ರೈಲ್ವೇ ನಿಲ್ದಾಣದ ಕಟ್ಟಡ ಇದಾಗಿದ್ದು, ಸುಮಾರು 125 ವರ್ಷಗಳು ಕಳೆದಿರಬಹುದು. ಕೆಲ ವರ್ಷಗಳ ಹಿಂದೆ ನೂತನ ಕಟ್ಟಡ ನಿರ್ಮಿಸಿದ ಬಳಿಕ ಸ್ಟೇಷನ್ ಮಾಸ್ಟರ್ ಕಚೇರಿ ಮತ್ತು ನಿಯಂತ್ರಣ ಕೊಠಡಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಆದರೂ ಪಾಳುಬಿದ್ದ ಕಟ್ಟಡವನ್ನು ರೈಲ್ವೇ ಇಲಾಖೆಯವರು ನೆಲಸಮಗೊಳಿಸಬೇಕಿತ್ತು ಅನ್ನುವುದು ಪ್ರಯಾಣಿಕರ ಆರೋಪವಾಗಿದೆ.

Related posts

Leave a Reply