Header Ads
Header Ads
Breaking News

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ 2019 : ಸಾಧಕಿಯರಿಗೆ ಅಬ್ಬಕ್ಕ ಪ್ರಶಸ್ತಿ ಪ್ರದಾನ

ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ 2018ವು ಕಳೆದ ಎರಡು ದಿನಗಳಿಂದ ಉಳ್ಳಾಲ ಮೊಗವೀರಪಟ್ಣದ ಸಮುದ್ರತಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿದ್ದು, ಸಮಾರೋಪ ಕಾರ್ಯಕ್ರಮದಲ್ಲಿ ನಡೆದ ಅಬ್ಬಕ್ಕ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ತರಂಗ ಸಂಪಾದಕಿ ಡಾ. ಸಂಧ್ಯಾ ಎಸ್ ಪೈ ಮತ್ತು ಸಮಾಜ ಸೇವಕಿ ಉರ್ಮಿಳಾ ರಮೇಶ್ ಕುಮಾರ್ ಅವರಿಗೆ ಅಬ್ಬಕ್ಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಅಬ್ಬಕ್ಕಳಿಗೂ ಜಿಎಸ್‌ಬಿ ಸಮುದಾಯಕ್ಕೂ ಒಂದು ಒಳ್ಳೆಯ ನಂಟಿದೆ. ಯಾಕೆಂದರೆ ಐನೂರು ವರ್ಷಗಳ ಹಿಂದೆ ಗೋವಾದಲ್ಲಿ ಜಿಎಸ್‌ಬಿ ಸಮುದಾಯ ಕೃಷಿ ಬೇಸಾಯ ಜೀವನ ಮಾಡಿಕೊಂಡು ಸುಂದರ ಜೀವನ ನಡೆಸುತ್ತಿದ್ದರು. ಪೋರ್ಚುಗೀಸರು ಗೋವಾಕ್ಕೆ ಕಾಲಿಟ್ಟ ನಂತರ ಹಲವು ವರ್ಷ ಸುಮ್ಮನಿದ್ದರು. ಬಳಿಕ ಅವರ ಮತಾಂತರ ಕ್ರಿಯೆ ಹೆಚ್ಚಿತು. ಧರ್ಮಾಂತರ ಪ್ರಕ್ರಿಯೆಯಿಂದಾಗಿ ದೇವಸ್ಥಾನಗಳನ್ನು ಹಾಳುಗೆಡಹಲು ಆರಂಭಿಸಿದರು. ಹಾಗಾಗಿ ಸಮುದಾಯದ ದೊಡ್ಡ ಗುಂಪು ಗೋವಾದಿಂದ ಪ್ರಯಾಣ ಮಾಡುತ್ತಾ ಇತ್ತ ಕಡೆ ಬಂದಾಗ ಸಮುದಾಯದವರಿಗೆ ಆಶ್ರಯ ಕೊಟ್ಟ ಮಹಾನ್ ತ್ಯಾಗಿ ರಾಣಿ ಅಬ್ಬಕ್ಕ ಎಂದರು.


ಅಬಕ್ಕ ಪ್ರಶಸ್ತಿ ಪಡೆದ ಸಾಹಿತಿ, ಸಮಾಜ ಸೇವಕಿ ಉರ್ಮಿಳಾ ರಮೇಶ್ ಕುಮಾರ್ ಮಾತನಾಡಿ ನನಗೆ ಪ್ರಶಸ್ತಿ ದೊರಕಲು ಕಾರಣಕರ್ತರಾದ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರ ಆಡಳಿತ ಮಂಡಳಿ, ಲಲಿಲಾ ಭಜನಾ ಮಂಡಳಿ ಹಾಗೂ ಬಿಲ್ಲವ ಏಕೀಕಕರಣ ವೇದಿಕೆಗೆ ಅಭಿನಂದನೆಗಳು. ಹಾಗೆಯೇ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಪ್ರಶಸ್ತಿ ನೀಡಿ ಗೌರವಿಸಿದ ಸಂಬಂಧಿಸಿ ಕೆಲಸ ಮಾಡಿದ ಎಲ್ಲರಿಗೂ ಗೌರವ ಪ್ರಣಾಮಗಳು ಎಂದು ಹೇಳಿದರು.

ಉತ್ಸವ ಸಮಿತಿ ಸದಸ್ಯರುಗಳಾದ ಪಿ.ಡಿ. ಶೆಟ್ಟಿ ಹಾಗೂ ನಮಿತಾ ಶ್ಯಾಂ ಪ್ರಶಸ್ತಿ ಪತ್ರ ವಾಚಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಹಾಗೂ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಭಾಸ್ಕರ ರೈ ಕುಕ್ಕುವಳ್ಳಿ, ಪತ್ರಕರ್ತ ಮನೋಹರ್ ಪ್ರಸಾದ್ ಹಾಗೂ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಶ್ ಬಿ. ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *