Header Ads
Header Ads
Breaking News

ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ನಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವ ತಯಾರಿ

ಉಳ್ಳಾಲ : ಪರೀಕ್ಷೆ ಅನ್ನುವುದು ಜೀವನದ ಹಂತ, ಅದನ್ನು ಪ್ರೀತಿಯಿಂದ ಎದುರಿಸುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಬೇಕಿದೆ ಎಂದು ಜಿಲ್ಲ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.ಅವರು ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಆಶ್ರಯದಲ್ಲಿ ತೊಕ್ಕೊಟ್ಟು ಕಲ್ಲಾಪು ಖಾಸಗಿ ಸಭಾಂಗಣದಲ್ಲಿ ಮಂಗಳವಾರ ಉಳ್ಳಾಲ ಝೋನಲ್ ವ್ಯಾಪ್ತಿಯ ಅನುದಾನ ಹಾಗೂ ಅನುದಾನ ರಹಿತ ಶಾಲೆಗಳ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪರೀಕ್ಷೆ ಪೂರ್ವ ತಯಾರಿ ಹಾಗೂ 2017ರ ಎಸ್ ಎಸ್ ಎಲ್ ಸಿ ಟಾಪರ್ ವಿದ್ಯಾರ್ಥಿ ಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಬರೆಯುವ ಅಭ್ಯಾಸವನ್ನು ಬೆಳೆಸುತ್ತಾ, ಕಲಿಯುವ ಸಂದರ್ಭ ಪ್ರಮುಖ ಅಂಶಗಳನ್ನು ಬರೆಯುತ್ತಿದ್ದಲ್ಲಿ ಪರೀಕ್ಷೆ ಸಂದರ್ಭದಲ್ಲಿ ಅನಿರೀಕ್ಷಿತ ಗೊಂದಲ, ಆತಂಕ ದೂರವಾಗಿ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಾಧ್ಯ. ಹೆತ್ತವರ ಮತ್ತು ಶಿಕ್ಷಕರ ಜತೆಗೆ ಚರ್ಚಿಸುತ್ತಾ ಸಂಶಯಗಳನ್ನು ನಿವಾರಿಸುತ್ತಾ ಪರೀಕ್ಷೆಗಳನ್ನು ಎದುರಿಸಿ ಎಂದರು.

ದ.ಕ ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸಮಿತಿ ಅಧ್ಯಕ್ಷ ಸಾಹುಲ್ ಹಮೀದ್ ಮಾತನಾಡಿ ಶಿಕ್ಷಣ ಮತ್ತು ಆರೋಗ್ಯ ಜೀವನದ ಮುಖ್ಯ ವಿಚಾರವಾಗಿದೆ.ಉತ್ತಮ ಶಿಕ್ಷಣ ಪಡೆದು ಜೀವನ ನಡೆಸುವ ಮೂಲಕ ಉತ್ತಮ ಪ್ರಜೆಯಾಗಬೇಕಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಅಧ್ಯಕ್ಷರು ಅನ್ವರ್ ಹುಸೈನ್ ಮಾತನಾಡಿ, ಮುಂಬರುವ ಪರೀಕ್ಷೆಗಳಿಗೆ ಉತ್ತಮ ಕಲಿತು, ಉತ್ತಮ ಫಲಿತಾಂಶ ತರುವ ಮೂಲಕ ಶಾಲೆ ಹಾಗೂ ಜಿಲ್ಲೆಯ ಕೀರ್ತಿಯನ್ನು ಬೆಳಗಿಸಬೇಕಿದೆ ಎಂದರು.ದ.ಕ ಡಿಡಿಪಿಐ ಶಿವರಾಮಯ್ಯ, ಮಂಗಳೂರು ದಕ್ಷಿಣ ಬಿಇಒ ಲೋಕೇಶ್, ಮಂಗಳೂರು ದಕ್ಷಿಣ ಝೋನಲ್ ಕಾ ಆರ್ಡಿನೇಟರ್ ಗೀತಾ ಶ್ಯಾನುಭೋಗ್ಉಪಸ್ಥಿತರಿದ್ದರು.
ನಡ ಬೆಳ್ತಂಗಡಿ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಯಾಕೂಬ್ ಕೊಯ್ಯೂರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಮಧ್ಯಾಹ್ನ ನಂತರ ನಡೆದ 2017ರ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು ನೆರವೇರಿಸಿದರು. ನಗರಸಭೆಯ ಪೌರಾಯುಕ್ತೆ ವಾಣಿ.ವಿ ಆಳ್ವ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕಿ ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೋ ಹಾಗೂ ಶಿಕ್ಷಣ ಸಂಯೋಜಕ ಫ್ರಾನ್ಸಿಸ್ ಮಿನೇಜಸ್ ಅವರನ್ನು ಸನ್ಮಾನಿಸಲಾಯಿತು.